alex Certify
ಕನ್ನಡ ದುನಿಯಾ       Mobile App
       

Kannada Duniya

ಇಂತಹ ಚಿಂತನೆಯಲ್ಲಿದೆಯಂತೆ ವೊಡಾಫೋನ್

vodafo

ನವದೆಹಲಿ: ರಿಲಯನ್ಸ್ ಜಿಯೋ ಬಂದಿದ್ದೇ ಬಂದಿದ್ದು, ಮೊಬೈಲ್ ಸೇವಾ ಕಂಪನಿಗಳೆಲ್ಲಾ ತತ್ತರಿಸಿ ಹೋಗಿವೆ. ಗ್ರಾಹಕರನ್ನು ಹಿಡಿದಿಟ್ಟುಕೊಳ್ಳಲು ಇನ್ನಿಲ್ಲದ ಕಾರ್ಯತಂತ್ರ ನಡೆಸುತ್ತಿದ್ದು, ಆಫರ್ ಮೇಲೆ ಆಫರ್ ಘೋಷಿಸುತ್ತಿವೆ.

ಜಿಯೋ 2017 ರ ಮಾರ್ಚ್ 31 ರ ವರೆಗೆ ಉಚಿತವಾಗಿ ಅನಿಯಮಿತ 4 ಜಿ ಡೇಟಾ, ವೋಲ್ಟ್ ಕರೆ ಸೌಲಭ್ಯ ನೀಡಲಿದೆ. ಗ್ರಾಹಕರಂತೂ ಜಿಯೋಗೆ ಮಾರು ಹೋಗಿದ್ದು, ಈಗಿರುವ ಶೇ. 85 ರಷ್ಟು ಗ್ರಾಹಕರು ಜಿಯೋ ಸಂಪರ್ಕವನ್ನು ಉಳಿಸಿಕೊಳ್ಳುವುದಾಗಿ ಹೇಳಿರುವುದು ಅಧ್ಯಯನ ಒಂದರಲ್ಲಿ ತಿಳಿದು ಬಂದಿದೆ.

ಇದೇ ಸಂದರ್ಭದಲ್ಲಿ ವೊಡಾಪೋನ್ ಕುರಿತಾದ ಮಾಹಿತಿಯೊಂದು ಹೊರ ಬಿದ್ದಿದೆ. ಜಿಯೋ ಜೊತೆಗೆ ಸ್ಪರ್ಧಿಸಲು ವೊಡಾಫೋನ್ ಇಂಡಿಯಾ ಬೇರೆ ಕಂಪನಿಯೊಂದಿಗೆ ವಿಲೀನಕ್ಕೆ ಚಿಂತನೆ ನಡೆಸಿದೆ.

ಭಾರತದ ಪ್ರಮುಖ ಟೆಲಿಕಾಂ ಕಂಪನಿಗಳೊಂದಿಗೆ ವಿಲೀನಕ್ಕೆ ವೊಡಾಫೋನ್ ಚಿಂತಿಸಿದ್ದು, ಐಡಿಯಾ ಅಥವಾ ಜಿಯೋ ಜೊತೆಗೇ ವಿಲೀನವಾಗುವ ಸಾಧ್ಯತೆ ಇದೆ ಎಂದು ಬ್ರಿಟಿಷ್ ನ್ಯೂಸ್ ಪೇಪರ್ ಟೆಲಿಗ್ರಾಫ್ ನಲ್ಲಿ ವರದಿಯಾಗಿದೆ.

Subscribe Newsletter

Get latest updates on your inbox...

Opinion Poll

  • ಕಪ್ಪು ಹಣಕ್ಕೆ ಕಡಿವಾಣ ಹಾಕುವ ಕೇಂದ್ರ ಸರ್ಕಾರದ ಪ್ರಯತ್ನ ವಿಫಲವಾಗಿದೆಯೇ..?

    View Results

    Loading ... Loading ...