alex Certify
ಕನ್ನಡ ದುನಿಯಾ       Mobile App
       

Kannada Duniya

ಇಷ್ಟು ಹಣಕ್ಕೆ 1 ಜಿಬಿ ಡೇಟಾ ನೀಡ್ತಿದೆ ವೋಡಾಫೋನ್

ಹಿಂದಿನ ವರ್ಷ ರಿಲಾಯನ್ಸ್ ಜಿಯೋ ಮಾರುಕಟ್ಟೆಗೆ ಬರ್ತಿದ್ದಂತೆ ಟೆಲಿಕಾಂ ಕಂಪನಿಗಳಲ್ಲಿ ಸ್ಪರ್ಧೆ ಶುರುವಾಗಿದೆ. ಎಲ್ಲ ಕಂಪನಿಗಳು ಆಕರ್ಷಕ ಆಫರ್ ಗಳನ್ನು ಗ್ರಾಹಕರಿಗೆ ನೀಡ್ತಿವೆ. ವೋಡಾಫೋನ್ ಸದ್ಯ 458 ಹಾಗೂ 509 ರೂಪಾಯಿಯ ಆಕರ್ಷಕ ಪ್ಲಾನ್ ಶುರುಮಾಡಿದೆ.

ವೋಡಾಫೋನ್ 458 ರೂಪಾಯಿ ಪ್ಲಾನ್ ನಲ್ಲಿ ಅನಿಯಮಿತ ಸ್ಥಳೀಯ ಹಾಗೂ ಎಸ್ಟಿಡಿ ಕರೆ, ಉಚಿತ ರೋಮಿಂಗ್, ಪ್ರತಿದಿನ 100 ಮೆಸ್ಸೇಜ್ ಸಿಗಲಿದೆ. ಇದ್ರ ಜೊತೆಗೆ ಕಂಪನಿ ಗ್ರಾಹಕರಿಗೆ ಪ್ರತಿದಿನ 1 ಜಿಬಿ ಡೇಟಾ ನೀಡಲಿದೆ. ಕಂಪನಿಯ ಈ ಪ್ಲಾನ್ 70 ದಿನಗಳದ್ದಾಗಿದೆ.

ವೋಡಾಫೋನ್ ನ 509 ಯೋಜನೆಯಲ್ಲಿ ಕೂಡ ಅನಿಯಮಿತ ಸ್ಥಳೀಯ ಹಾಗೂ ಎಸ್ಟಿಡಿ ಕರೆ, ಉಚಿತ ರೋಮಿಂಗ್, ಪ್ರತಿದಿನ 100 ಮೆಸ್ಸೇಜ್ ಜೊತೆಗೆ 1 ಜಿಬಿ ಡೇಟಾ ಸಿಗಲಿದೆ. ಇದು 84 ದಿನಗಳ ಪ್ಲಾನ್ ಆಗಿದೆ. ಅನಿಯಮಿತ ಕರೆಗೂ ಕಂಪನಿ ಕೆಲವೊಂದು ಷರತ್ತು ವಿಧಿಸಿದೆ. ಪ್ರತಿದಿನ 250 ನಿಮಿಷ ಹಾಗೂ ವಾರಕ್ಕೆ ಸಾವಿರ ನಿಮಿಷ ಮಾತ್ರ ಉಚಿತ ಕರೆ ಮಾಡಬಹುದಾಗಿದೆ. ಇದಕ್ಕಿಂತ ಹೆಚ್ಚು ಸಮಯ ಮಾತನಾಡಿದ್ರೆ ಹಣ ಕಟ್ ಆಗಲಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...