alex Certify
ಕನ್ನಡ ದುನಿಯಾ       Mobile App
       

Kannada Duniya

ಡ್ಯುಯಲ್ ಕ್ಯಾಮರಾ, 4ಜಿ ರ್ಯಾಮ್ ಜೊತೆ ಬಿಡುಗಡೆಯಾಯ್ತ ಈ ಸ್ಮಾರ್ಟ್ಫೋನ್

ವಿವೋ Z1i ಸ್ಮಾರ್ಟ್ಫೋನ್ ಬಿಡುಗಡೆಯಾಗಿದೆ. ಚೀನಾ ಮಾರುಕಟ್ಟೆಗೆ ವಿವೋ Z1i ಸ್ಮಾರ್ಟ್ಫೋನ್ ಲಗ್ಗೆಯಿಟ್ಟಿದೆ. ಕಂಪನಿ ಈ ಸ್ಮಾರ್ಟ್ಫೋನ್ ಗೆ ಸಿಎನ್ವೈ 1,898 ( ಸುಮಾರು 19,600 ರೂ.) ನಿಗದಿಪಡಿಸಿದೆ. ಗ್ರಾಹಕರಿಗೆ ಈ ಫೋನ್ ಕೆಂಪು ಹಾಗೂ ಕಪ್ಪು ಬಣ್ಣದಲ್ಲಿ ಲಭ್ಯವಿದೆ. ಚೀನಾದಲ್ಲಿ ಜುಲೈ 7 ರಿಂದ ಇದ್ರ ಮಾರಾಟ ಶುರುವಾಗಲಿದೆ.

ಡ್ಯುಯಲ್ ಸಿಮ್ ಗೆ ಸಪೋರ್ಟ್ ಮಾಡುವ ಈ ಫೋನ್ ಆಂಡ್ರಾಯ್ಡ್ 8.1 ಒರಿಯೋ ಆಧಾರಿತ Funtouch OS 4.0 ನಲ್ಲಿ ನಡೆಯಲಿದೆ. 6.26 ಇಂಚಿನ ಫುಲ್ ಹೆಚ್ಡಿ ಐಪಿಎಸ್ ಡಿಸ್ಪ್ಲೇ ನೀಡಲಾಗಿದೆ. ಈ ಸ್ಮಾರ್ಟ್ಫೋನ್ ನಲ್ಲಿ 4 ಜಿಬಿ ರ್ಯಾಮ್ ಹಾಗೂ Adreno 509 GPU ಜೊತೆ 1.8GHz ಆಕ್ಟಾ ಕೋರ್ ಕ್ವಾಲ್ಕಾಮ್ ಸ್ನಾಪ್ಡ್ರಾಗನ್ 636 ಪ್ರೊಸೆಸರ್ ನೀಡಲಾಗಿದೆ.

ಸ್ಮಾರ್ಟ್ಫೋನ್ ಗೆ ಡ್ಯುಯಲ್ ಕ್ಯಾಮರಾ ನೀಡಲಾಗಿದೆ. ಮೊದಲ ಕ್ಯಾಮರಾ 13 ಮೆಗಾಪಿಕ್ಸಲ್ ಹೊಂದಿದ್ದರೆ ಎರಡನೇ ಕ್ಯಾಮರಾ 2 ಮೆಗಾಪಿಕ್ಸಲ್ ಹೊಂದಿದೆ. ರಿಯಲ್ ಕ್ಯಾಮರಾ ಎಲ್ಇಡಿ ಗೆ ಬೆಂಬಲ ನೀಡಲಿದೆ. ಸೆಲ್ಫಿ ಕ್ಯಾಮರಾ 16 ಮೆಗಾಪಿಕ್ಸಲ್ ಹೊಂದಿದೆ.

ಸ್ಮಾರ್ಟ್ಫೋನ್ ಇಂಟರ್ನಲ್ ಮೆಮೋರಿ 128 ಜಿಬಿ ಯಾಗಿದ್ದು, ಕಾರ್ಡ್ ಸಹಾಯದಿಂದ 256 ಜಿಬಿ ಗೆ ವಿಸ್ತರಿಸಬಹುದಾಗಿದೆ. ಈ ಸ್ಮಾರ್ಟ್ಫೋನ್ ನಲ್ಲಿ 4 ಜಿ ವಾಲೆಟ್, ವೈ-ಫೈ, ಮೈಕ್ರೋ ಯುಎಸ್ಬಿ ಸೇರಿದಂತೆ ಅನೇಕ ಸೌಲಭ್ಯಗಳನ್ನು ನೀಡಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...