alex Certify
ಕನ್ನಡ ದುನಿಯಾ       Mobile App
       

Kannada Duniya

2ಜಿಬಿ ರ್ಯಾಮ್ ಜೊತೆ ಬಿಡುಗಡೆಯಾದ ವಿವೋ ವೈ71 ಬೆಲೆ ಎಷ್ಟು ಗೊತ್ತಾ?

ಚೀನಿ ಸ್ಮಾರ್ಟ್ಫೋನ್ ಕಂಪನಿ ವಿವೋ ಭಾರತದಲ್ಲಿ ವಿವೋ ವೈ 71 ಬಿಡುಗಡೆ ಮಾಡಿದೆ. ಈ ಫೋನ್ ಆನ್ಲೈನ್ ಹಾಗೂ ಆಫ್ಲೈನ್ ಮಳಿಗೆಗಳೆರಡರಲ್ಲೂ ಲಭ್ಯವಿದೆ. ಆನ್ಲೈನ್ ನಲ್ಲಿ ಈ ಮೊಬೈಲ್ 10,990 ರೂಪಾಯಿಗೆ ಲಭ್ಯವಿದೆ.

ವಿವೋ ವೈ71 ಐ ಕೂಡ ಶೀಘ್ರದಲ್ಲೇ ಮಾರುಕಟ್ಟೆಗೆ ಬರಲಿದೆ. ವಿವೋ ವೈ71 ಫೋನ್ ನ ಕೆಲ ಫೀಚರ್ ಹೊರತು ಪಡಿಸಿದ್ರೆ ವಿವೋ ವೈ71 ಐ ಸ್ಮಾರ್ಟ್ಫೋನ್ ಫೀಚರ್ ಬಹತೇಕ ಒಂದೇ ಇರಲಿದೆ ಎಂದು ಮೂಲಗಳು ಹೇಳಿವೆ. ವಿವೋ ವೈ71 ಸ್ಮಾರ್ಟ್ಫೋನ್ ಬೆಲೆಗಿಂತ ವಿವೋ ವೈ71 ಐ ಫೋನ್ ಬೆಲೆ ಕಡಿಮೆಯಿರಲಿದೆಯಂತೆ. ಮಾಧ್ಯಮಗಳ ವರದಿ ಪ್ರಕಾರ ವಿವೋ ವೈ71 ಐ ಫೋನ್ ಬೆಲೆ 8,990 ರೂಪಾಯಿ ಎಂದು ಅಂದಾಜಿಸಲಾಗಿದೆ.

ವರದಿ ಪ್ರಕಾರ ಇದ್ರ ರ್ಯಾಮ್ ಕಡಿಮೆಯಿರಲಿದೆಯಂತೆ. ವಿವೋ ವೈ71 ಮೊಬೈಲ್ 2ಜಿಬಿ ರ್ಯಾಮ್ ಜೊತೆ ಗ್ರಾಹಕರಿಗೆ ಸಿಗಲಿದೆ. 16 ಜಿಬಿ ಸ್ಟೋರೇಜ್ ಇರಲಿದ್ದು, 256 ಜಿಬಿ ಯವರೆಗೆ ಇದನ್ನು ವಿಸ್ತರಿಸಬಹುದಾಗಿದೆ. ಮೆಮೋರಿ ಕಾರ್ಡ್ ಜೊತೆ ಎರಡು ಸಿಮ್ ಅಳವಡಿಸಲಾಗುವುದು. 8 ಮೆಗಾಪಿಕ್ಸಲ್ ಕ್ಯಾಮರಾ ಹಾಗೂ 5 ಮೆಗಾಪಿಕ್ಸಲ್ ಸೆಲ್ಫಿ ಕ್ಯಾಮರಾ ಅಳವಡಿಸಲಾಗಿದೆ. 3,360 mAh ಬ್ಯಾಟರಿಯನ್ನು ಅಳವಡಿಸಲಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...