alex Certify
ಕನ್ನಡ ದುನಿಯಾ       Mobile App
       

Kannada Duniya

ನಾಲ್ಕು ಸಾವಿರದವರೆಗೆ ಇಳಿಕೆಯಾಯ್ತು ವಿವೋ ಮೊಬೈಲ್ ಬೆಲೆ

ಸ್ಮಾರ್ಟ್ಫೋನ್ ಪ್ರಿಯರಿಗೆ ಖುಷಿ ಸುದ್ದಿ. ವಿವೋ ಕಂಪನಿ ತನ್ನ ಮೊಬೈಲ್ ಬೆಲೆಯಲ್ಲಿ ಇಳಿಕೆ ಮಾಡಿದೆ. ವಿವೋ ಕಂಪನಿ Vivo V9, Vivo Y83 ಮತ್ತು Vivo X21 ಮೊಬೈಲ್ ಬೆಲೆಯಲ್ಲಿ ಇಳಿಕೆ ಮಾಡಿದೆ. ಆಗಸ್ಟ್ 27 ಸೋಮವಾರ ಅಂದ್ರೆ ಇವತ್ತಿನಿಂದ ಇಳಿಕೆಯಾದ ದರದಲ್ಲಿ ವಿವೋ ಮೊಬೈಲ್ ಗ್ರಾಹಕರಿಗೆ ಲಭ್ಯವಾಗಲಿದೆ.

ವಿವೋ ವಿ 9 ಮೊಬೈಲ್ ಬೆಲೆ 22,990 ರೂಪಾಯಿಯಾಗಿದ್ದು, ಇನ್ಮುಂದೆ 18,990 ರೂಪಾಯಿಗೆ ಸಿಗಲಿದೆ. ವಿವೋ ವೈ83 ಮೊಬೈಲ್ ಬೆಲೆ 14,990 ರೂಪಾಯಿಯಾಗಿದ್ದು ಇನ್ಮುಂದೆ ಮೊಬೈಲ್ 13,990 ರೂಪಾಯಿಗೆ ಲಭ್ಯವಾಗಲಿದೆ. ಭಾರತೀಯ ಗ್ರಾಹಕರಿಗೆ ವಿವೋ ವಿ9 ಮೊಬೈಲ್ ಶಾಂಪೇನ್ ಗೋಲ್ಡ್, ಪರ್ಲ್ ಬ್ಲಾಕ್ ಮತ್ತು ಸಫಾರಿ ಬ್ಲೂ ಬಣ್ಣದಲ್ಲಿ ಸಿಗ್ತಿದೆ.

ವಿವೋ ಎಕ್ಸ್ 21 ಮೊಬೈಲ್ ಬೆಲೆಯಲ್ಲೂ ಇಳಿಕೆಯಾಗಿದೆ. ಇದು 4 ಜಿಬಿ ರ್ಯಾಮ್ ಹಾಗೂ 32 ಜಿಬಿ ಸ್ಟೋರೇಜ್ ಹೊಂದಿದೆ. ಕಪ್ಪು ಹಾಗೂ ಬಂಗಾರದ ಬಣ್ಣದಲ್ಲಿ ವಿವೋ ಎಕ್ಸ್ 21 ಮೊಬೈಲ್ ಗ್ರಾಹಕರಿಗೆ ಸಿಗ್ತಿದೆ. 35,990 ರೂಪಾಯಿಗೆ ಭಾರತದಲ್ಲಿ ಈ ಮೊಬೈಲ್ ಬಿಡುಗಡೆಯಾಗಿತ್ತು. ಆದ್ರೀಗ 4 ಸಾವಿರ ರೂಪಾಯಿ ಇಳಿಕೆಯಾಗಿದ್ದು, ಕಂಪನಿ ಇದನ್ನು 31,990 ರೂಪಾಯಿಗೆ ಮಾರಾಟ ಮಾಡಲು ನಿರ್ಧರಿಸಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...