alex Certify
ಕನ್ನಡ ದುನಿಯಾ       Mobile App
       

Kannada Duniya

BFF ಬಗ್ಗೆ ಫೇಸ್ಬುಕ್ ನಲ್ಲಿ ಹರಡಿದೆ ಸುಳ್ಳು ಸುದ್ದಿ

ಫೇಸ್ಬುಕ್ ನಲ್ಲಿ ಅನೇಕ ಸುಳ್ಳು ಸುದ್ದಿಗಳು ಹರಡುತ್ತಿರುತ್ತವೆ. ಆದ್ರೆ ಕೆಲ ದಿನಗಳಿಂದ ಫೇಸ್ಬುಕ್ ಬಗ್ಗೆಯೇ ಸುದ್ದಿಯೊಂದು ಹಬ್ಬಿದೆ. ಇದನ್ನು ಸತ್ಯ ಎಂದು ನಂಬಿರುವ ಜನರು ತಮ್ಮ ಸ್ನೇಹಿತರಿಗೂ ಆ ಸಂದೇಶವನ್ನು ಕಳುಹಿಸುತ್ತಿದ್ದಾರೆ.

`ಫೇಸ್ಬುಕ್ ಸಿಇಒ ಮಾರ್ಕ್ ಜ್ಯೂಕರ್ಬರ್ಗ್ ಖಾತೆಯನ್ನು ಸುರಕ್ಷಿತವಾಗಿಡಲು BFF ಕಂಡು ಹಿಡಿದಿದ್ದಾರೆ. ನಿಮಗೆ ಬರುವ ಸಂದೇಶದ ಕೆಳಗೆ ಕಮೆಂಟ್ ಬಾಕ್ಸ್ ನಲ್ಲಿ ನೀವು BFF ಟೈಪ್ ಮಾಡಬೇಕು. ಅದು ಹಸಿರು ಬಣ್ಣದಲ್ಲಿ ಬಂದ್ರೆ ನಿಮ್ಮ ಖಾತೆ ಸುರಕ್ಷಿತವಾಗಿದೆ ಎಂದರ್ಥ. ಹಸಿರು ಬಣ್ಣ ಬರದೆ ಹೋದಲ್ಲಿ ಪಾಸ್ವರ್ಡ್ ಬದಲಿಸಿ’’. ಹೀಗೊಂದು ಸುದ್ದಿ ಎಲ್ಲೆಡೆ ಹರಡಿದೆ.

ಆದ್ರೆ ಹೀಗೆ ಹರಡಿರುವ ಸುದ್ದಿ ಸಂಪೂರ್ಣ ಸುಳ್ಳು. ಜನರಿಗೆ ‘BFF’ ಅರ್ಥ ಗೊತ್ತಿಲ್ಲ. ಇದೇ ಕಾರಣಕ್ಕೆ ಅನೇಕರು ಈ ಸುದ್ದಿಯನ್ನು ನಿಜವೆಂದು ನಂಬಿದ್ದಾರೆ. ಕೆಲ ದಿನಗಳ ಹಿಂದೆ ಫೇಸ್ಬುಕ್ ಶುಭಾಶಯ ಕೋರಿದವರ ಕಮೆಂಟ್ ಕೇಸರಿ ಬಣ್ಣದಲ್ಲಿ ಬರುವ ಫೀಚರ್ ಶುರು ಮಾಡಿದೆ. BFF ಕೂಡ ಇಂಥಹದ್ದೇ ಒಂದು ಫೀಚರ್ ಆಗಿದೆ. BFF ಅರ್ಥ ಬೆಸ್ಟ್ ಫ್ರೆಂಡ್ ಫಾರೆವರ್ ಎಂದಾಗಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...