alex Certify
ಕನ್ನಡ ದುನಿಯಾ       Mobile App
       

Kannada Duniya

ಹರಾಜಿಗಿದೆ ವಿಜಯ್ ಮಲ್ಯರ ಕಿಂಗ್ ಫಿಶರ್ ವಿಲ್ಲಾ

MALYA VILLAವಿಜಯ್ ಮಲ್ಯ ಗೆ ಸೇರಿದ ಗೋವಾದಲ್ಲಿರುವ ಕಿಂಗ್ ಫಿಶರ್ ವಿಲ್ಲಾ ಹರಾಜಿಗಿದೆ. ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಇದನ್ನು 85 ಕೋಟಿ ರೂಪಾಯಿಗೆ ಹರಾಜಿಗಿಟ್ಟಿದೆ. ಅಕ್ಟೋಬರ್ 19ರಂದು ಹರಾಜು ಪ್ರಕ್ರಿಯೆ ನಡೆಯಲಿದೆ.

ಮಲ್ಯಗೆ ಸೇರಿದ ಜನಪ್ರಿಯ ಬಂಗಲೆ ಇದು, 6 ತಿಂಗಳ ಹಿಂದಷ್ಟೆ ಇದನ್ನು ಬ್ಯಾಂಕ್ ಗಳಿಗೆ ಲಗತ್ತಿಸಲಾಗಿತ್ತು. ಅದಾದ್ಮೇಲೆ ಮಲ್ಯ ತಮ್ಮ 60ನೇ ಹುಟ್ಟುಹಬ್ಬವನ್ನು ಅದ್ಧೂರಿಯಾಗಿ ಆಚರಿಸಿಕೊಂಡಿದ್ರು. ಕಂಡೋಲಿಮ್ ಬೀಚ್ ಬಳಿ 12,350 ಸ್ಕ್ವೇರ್ ಮೀಟರ್ ವ್ಯಾಪ್ತಿಯಲ್ಲಿ ಈ ಬಂಗಲೆ ಇದೆ. 3 ಬೆಡ್ ರೂಮ್, ಲಿವಿಂಗ್ ರೂಮ್ ಇರುವ ಸುಸಜ್ಜಿತ ಬಂಗಲೆ ಇದು. ಈ ತಿಂಗಳ 26, 27 ರಂದು ಹಾಗೂ ಅಕ್ಟೋಬರ್ 5 ಮತ್ತು 6 ರಂದು ಬಂಗಲೆ ಪರಿಶೀಲನೆಗೆ ಅವಕಾಶ ನೀಡಲಾಗಿದೆ.

ವೈಯಕ್ತಿಕ ಗ್ಯಾರಂಟಿ ಮೇಲೆ ಸಾವಿರಾರು ಕೋಟಿ ರೂಪಾಯಿ ಸಾಲ ಪಡೆದಿದ್ದ ಮಲ್ಯ ವಿದೇಶದಲ್ಲಿ ತಲೆಮರೆಸಿಕೊಂಡಿದ್ದಾರೆ. ಬ್ಯಾಂಕ್ ಸಾಲ ತೀರಿಸದ ಹಿನ್ನೆಲೆಯಲ್ಲಿ ಅವರ ಆಸ್ತಿ ಹರಾಜು ಹಾಕಲಾಗ್ತಿದೆ. ಆದ್ರೆ ಮಲ್ಯಗೆ ಸೇರಿದ ಆಸ್ತಿ- ಪಾಸ್ತಿ ಖರೀದಿಸಲು ಯಾರೂ ಮುಂದೆ ಬರುತ್ತಿಲ್ಲ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...