alex Certify
ಕನ್ನಡ ದುನಿಯಾ       Mobile App
       

Kannada Duniya

ಡಿ.18 ರಂದು ಕೋರ್ಟ್ ಗೆ ಹಾಜರಾಗ್ತಾರಾ ಮಲ್ಯ..?

ಭಾರತದ ಬ್ಯಾಂಕ್ ನಿಂದ 9 ಸಾವಿರ ಕೋಟಿ ರೂ. ಸಾಲ ಪಡೆದು ದೇಶ ಬಿಟ್ಟು ಓಡಿ ಹೋಗಿರುವ ಮದ್ಯದ ದೊರೆ ಮಲ್ಯ ಡಿಸೆಂಬರ್ 18ರಂದು ಕೋರ್ಟ್ ಗೆ ಹಾಜರಾಗಬೇಕಿದೆ. ಮಲ್ಯ ಎಲ್ಲೇ ಇರಲಿ ಡಿಸೆಂಬರ್ 18ರಂದು ಕೋರ್ಟ್ ಗೆ ಹಾಜರಾಗಬೇಕೆಂದು ಪಟಿಯಾಲಾ ಕೋರ್ಟ್ ಆದೇಶ ನೀಡಿದೆ.

ಮಲ್ಯರನ್ನು ಘೋಷಿತ ಅಪರಾಧಿ ಎಂದು ಘೋಷಣೆ ಮಾಡಬೇಕೆಂದು ಜಾರಿ ನಿರ್ದೇಶನಾಲಯ ಕೋರ್ಟ್ ಮುಂದೆ ಬೇಡಿಕೆಯಿಟ್ಟಿತ್ತು. ದೆಹಲಿ ಪಟಿಯಾಲಾ ಕೋರ್ಟ್ ಬಾಗಿಲು ತಟ್ಟಿದ್ದ ಇಡಿ ಮಲ್ಯನನ್ನು ಘೋಷಿತ ಅಪರಾಧಿ ಎಂದು ಘೋಷಣೆ ಮಾಡಬೇಕು ಎಂದು ಅರ್ಜಿ ಸಲ್ಲಿಸಿತ್ತು. ಇದ್ರ ವಿಚಾರಣೆ ನಡೆಸಿದ ಪಟಿಯಾಲಾ ಕೋರ್ಟ್ ಡಿಸೆಂಬರ್ 18ರಂದು ಮಲ್ಯ ಎಲ್ಲೆ ಇದ್ರೂ ಕೋರ್ಟ್ ಮುಂದೆ ಹಾಜರಾಗಬೇಕೆಂದು ನಿರ್ದೇಶನ ನೀಡಿದೆ. ಇಲ್ಲವಾದ್ರೆ ಘೋಷಿತ ಅಪರಾಧಿಯೆಂದು ಘೋಷಣೆ ಮಾಡುವಂತೆ ಹೇಳಿದೆ.

ನ್ಯಾಯಾಲಯ ಸೆಪ್ಟೆಂಬರ್ 9ರಂದೇ ಕೋರ್ಟ್ ಮುಂದೆ ಹಾಜರಾಗುವಂತೆ ಹೇಳಿತ್ತು. ಆದ್ರೆ ಮಲ್ಯ ಕೋರ್ಟ್ ಗೆ ಬಂದಿರಲಿಲ್ಲ. ಈ ವೇಳೆ ಮಲ್ಯ ಪರ ವಕೀಲರು ಸಮಜಾಯಿಷಿ ನೀಡಿದ್ದರು. ಮಲ್ಯ ಭಾರತಕ್ಕೆ ಬರಲು ಇಚ್ಛಿಸಿದ್ದಾರೆ. ಆದ್ರೆ ಅವರ ಪಾಸ್ ಪೋರ್ಟ್ ರದ್ದಾಗಿದೆ ಎಂದಿದ್ದರು. ಮಲ್ಯ ಗೈರನ್ನು ನ್ಯಾಯಾಲಯದ ಆದೇಶ ಉಲ್ಲಂಘನೆ ಎಂದು ಪರಿಗಣಿಸಿರುವ ಕೋರ್ಟ್ ಡಿಸೆಂಬರ್ 18ರಂದು ಮಲ್ಯ ಹಾಜರಾಗಬೇಕೆಂದು ಕಟ್ಟುನಿಟ್ಟಿನ ಆದೇಶ ಹೊರಡಿಸಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...