alex Certify
ಕನ್ನಡ ದುನಿಯಾ       Mobile App
       

Kannada Duniya

ಗ್ರಾಹಕರು ಮರೆಯದೇ ಓದಿ ಈ ಸುದ್ದಿ….

ಹಣ್ಣು ಮತ್ತು ತರಕಾರಿ ವ್ಯಾಪಾರಿಗಳು ಗ್ರಾಹಕರಿಗೆ ಯಾವ ರೀತಿ ಮೋಸ ಮಾಡ್ತಾರೆ ಅನ್ನೋದ್ರ ವಿಡಿಯೋ ಫೇಸ್ಬುಕ್ ನಲ್ಲಿ ವೈರಲ್ ಆಗಿದೆ. ಅವುಗಳ ಗುಣಮಟ್ಟ ಮತ್ತು ಪ್ರಮಾಣದಲ್ಲಾಗ್ತಿರೋ ವಂಚನೆಯನ್ನು ಕೆಲವರು ರಹಸ್ಯ ಕ್ಯಾಮರಾ ಮೂಲಕ ಬಯಲು ಮಾಡಿದ್ದಾರೆ.

ನಾಲ್ಕು ವಿಡಿಯೋಗಳನ್ನು ಫೇಸ್ಬುಕ್ ನಲ್ಲಿ ಪೋಸ್ಟ್ ಮಾಡಲಾಗಿದೆ. ಒಂದು ವಿಡಿಯೋದಲ್ಲಿ ವ್ಯಾಪಾರಿ ತೂಕದಲ್ಲಿ ಮೋಸ ಮಾಡಿದ್ದಾನೆ. ತಕ್ಕಡಿ ಮೇಲೆ ಒಂದು ಹಣ್ಣನ್ನಿಟ್ಟು ಯಾಮಾರಿಸಿರೋದು ಕ್ಯಾಮರಾದಲ್ಲಿ ರೆಕಾರ್ಡ್ ಆಗಿದೆ. ಇನ್ನೋರ್ವ ಕಂಟೇನರ್ ಕೆಳಗೆ ವೇಯ್ಟ್ ಇಟ್ಟು ತೂಕದಲ್ಲಿ ಮೋಸ ಮಾಡಿದ್ದಾನೆ.

ಇನ್ನೆರಡು ವಿಡಿಯೋಗಳು ಕೂಡ ಇದೇ ರೀತಿ ಶಾಕಿಂಗ್ ಆಗಿವೆ. ವ್ಯಾಪಾರಿಗಳ ಚಾಕಚಾಕ್ಯತೆ, ಕಣ್ಮುಚ್ಚಿ ತೆರೆಯುವುದರಲ್ಲಿ ಗ್ರಾಹಕರನ್ನು ವಂಚಿಸುವ ರೀತಿ ನೋಡಿದ್ರೆನೀವು ಕೂಡ ದಂಗಾಗೋದು ಗ್ಯಾರಂಟಿ. ಈ ವಿಡಿಯೋಗಳನ್ನು ನೋಡಿದ್ಮೇಲಾದ್ರೂ ಗ್ರಾಹಕರು ಎಚ್ಚೆತ್ತುಕೊಳ್ಳಲೇಬೇಕು.

 

This is how people gonna cheat you.Watch it carefully till the end.

Posted by Vikram Maiya on Sunday, November 19, 2017

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...