alex Certify
ಕನ್ನಡ ದುನಿಯಾ       Mobile App
       

Kannada Duniya

ಕಾಲೇಜು ಬಿಟ್ಟರೂ ಕನಸು ಕಾಣುವುದನ್ನು ಬಿಡಲಿಲ್ಲ….

varun 1ಅವರು ಅರ್ಧದಲ್ಲೇ ಕಾಲೇಜು ಬಿಟ್ಟ ಯುವಕ, ಈಗ ಯಶಸ್ವಿ ಕಂಪನಿಯೊಂದರ ಮಾಲೀಕ. ಕೇರಳದ ವರುಣ್ ಚಂದ್ರನ್ ಅವರ ಯಶೋಗಾಥೆ ಇದು. ವರುಣ್ ಗೆ ಮೊದಲಿನಿಂದ್ಲೂ ಫುಟ್ ಬಾಲ್ ಆಟಗಾರನಾಗಬೇಕೆಂಬ ಕನಸು. ಕೇರಳ ಫುಟ್ ಬಾಲ್ ತಂಡವನ್ನು ಕೂಡ ಅವರು ಪ್ರತಿನಿಧಿಸಿದ್ದಾರೆ.

ಆದ್ರೆ ಫುಟ್ ಬಾಲ್ ಆಡುವ ಕನಸು ಒಂದು ದಿನ ಕಮರಿ ಹೋಯ್ತು. ಮೈದಾನದಲ್ಲಿ ಗಾಯಗೊಂಡು ಆಟದ ಆಸೆಯನ್ನೇ ತ್ಯಜಿಸಬೇಕಾಯ್ತು. ಶಿಕ್ಷಣ ಮುಂದುವರಿಸಲು ವರುಣ್ ಬಳಿ ಹಣವಿರಲಿಲ್ಲ. ಅನಿವಾರ್ಯವಾಗಿ ಅರ್ಧಕ್ಕೆ ಕಾಲೇಜು ಬಿಟ್ಟು ಕೆಲಸ ಹುಡುಕಿಕೊಂಡು ವರುಣ್ ಬೆಂಗಳೂರಿಗೆ ಬಂದ್ರು. 2002-04 ರವರೆಗೆ ಎಚ್ ಪಿ ಮತ್ತು ಡೆಲ್ ಕಂಪನಿಯ ಕಾಲ್ ಸೆಂಟರ್ ನಲ್ಲಿ ಕೆಲಸ ಮಾಡಿದ್ರು.

ಸಾಫ್ಟ್ ವೇರ್ ತರಬೇತಿ ಮುಗಿಸಿದ ವರುಣ್ ಗೆ ಎನ್ ಟಿ ಟಿ ಡೇಟಾ ಕಂಪನಿಯಲ್ಲಿ ಉದ್ಯೋಗ ಸಿಕ್ಕು, ಅಮೆರಿಕಕ್ಕೆ ಹಾರಿದ್ರು. ಅಲ್ಲಿ ಸ್ಯಾಪ್ ಮತ್ತು ಒರಾಕಲ್ ಕಂಪನಿಗಳಲ್ಲಿ ಕೆಲಸ ಮಾಡ್ತಿದ್ದಾಗ ವರುಣ್ ಮನದಲ್ಲಿ ಉದ್ಯಮಿಯಾಗಬೇಕೆಂಬ ಆಸೆ ಮೊಳಕೆಯೊಡೆದಿತ್ತು. ತಾವು ಹುಟ್ಟಿ ಬೆಳೆದ ಹಳ್ಳಿ ಪಥನಪುರಂನಲ್ಲೇ ಕಂಪನಿ ಆರಂಭಿಸಬೇಕೆಂದು ನಿರ್ಧರಿಸಿದ ವರುಣ್, ‘ಕಾರ್ಪೊರೇಟ್ 360’ ಸಂಸ್ಥೆಯನ್ನು ಹುಟ್ಟುಹಾಕಿದ್ರು.

ತಮ್ಮ ಗ್ರಾಮದವರಿಗೆ ಉದ್ಯೋಗ ಕಲ್ಪಿಸಬೇಕೆಂಬುದು ಅವರ ಉದ್ದೇಶ. ಕೇವಲ 5 ಜನರೊಂದಿಗೆ ಆರಂಭವಾದ ಈ ಡೇಟಾ ಸಾಫ್ಟ್ ವೇರ್ ಕಂಪನಿಯಲ್ಲೀಗ 50ಕ್ಕೂ ಹೆಚ್ಚು ಸಿಬ್ಬಂದಿ ಕೆಲಸ ಮಾಡ್ತಿದ್ದಾರೆ. ಕೋಟಿಗಟ್ಟಲೆ ವಹಿವಾಟು ನಡೆಯುತ್ತಿದೆ. ಡೆಲ್, ಎಚ್ ಪಿ, ಒರಾಕಲ್ ನಂತಹ ಹತ್ತಾರು ಕಂಪನಿಗಳು ವರುಣ್ ಅವರ ಕ್ಲೈಂಟ್ಸ್. ವಹಿವಾಟನ್ನು ಇನ್ನಷ್ಟು ವಿಸ್ತರಿಸಲು ಕೂಡ ವರುಣ್ ಯೋಜನೆ ಹಾಕಿಕೊಂಡಿದ್ದಾರೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...