alex Certify
ಕನ್ನಡ ದುನಿಯಾ       Mobile App
       

Kannada Duniya

ಪುತ್ರನ ವಿರುದ್ಧ ಮುಲಾಯಂ ಚುನಾವಣಾ ಪ್ರಚಾರ

mulayam-singh-yadav-akhilesh

ಮುಲಾಯಂ ಸಿಂಗ್ ಉತ್ತರ ಪ್ರದೇಶ ಚುನಾವಣಾ ಪ್ರಚಾರದ ಅಖಾಡಕ್ಕೆ ಇಳಿದಿದ್ದಾರೆ. ಇಟಾವಾದಲ್ಲಿ ಇಂದು ಅವರು ಮೊದಲ ರ್ಯಾಲಿ ನಡೆಸಿದ್ರು. ಸಹೋದರ ಶಿವಪಾಲ್ ಯಾದವ್ ಅವರ ಕ್ಷೇತ್ರ ಜಸ್ವಂತ್ ನಗರದಲ್ಲಿ ಮಾತನಾಡಿದ ಮುಲಾಯಂ ತಮ್ಮ ಪಕ್ಷ ಎಸ್ಪಿ ಪರ ಮತ ಯಾಚಿಸಲಿಲ್ಲ.

ಬದಲಾಗಿ ಎದುರಾಳಿ ಪಕ್ಷ ಲೋಕ ದಳಕ್ಕೆ ಮತ ನೀಡುವಂತೆ ಜನರಲ್ಲಿ ಮನವಿ ಮಾಡಿದ್ರು. ಈ ಮೂಲಕ ಪುತ್ರ ಅಖಿಲೇಶ್ ಯಾದವ್ ಅವರ ವಿರುದ್ಧವೇ ಮುಲಾಯಂ ಪ್ರಚಾರ ಶುರು ಮಾಡಿದ್ದಾರೆ. ಇಟಾವಾದ ಮೂರು ವಿಧಾನಸಭಾ ಕ್ಷೇತ್ರಗಳಿಗೆ ಫೆಬ್ರವರಿ 19ರಂದು ಚುನಾವಣೆ ನಡೆಯಲಿದೆ.

2012ರ ಎಲೆಕ್ಷನ್ ನಲ್ಲಿ ಮೂರು ಸ್ಥಾನಗಳಲ್ಲೂ ಸಮಾಜವಾದಿ ಪಕ್ಷ ಗೆಲುವು ಸಾಧಿಸಿತ್ತು. ಆದ್ರೆ ಈ ಬಾರಿ ಮುಲಾಯಂ ಆಯ್ಕೆ ಮಾಡಿದ್ದ ಅಭ್ಯರ್ಥಿ ಹೆಸರನ್ನು ಬದಿಗೊತ್ತಿ ಅಖಿಲೇಶ್ ಈ ಕ್ಷೇತ್ರದಲ್ಲಿ ಶಿವಪಾಲ್ ಯಾದವ್ ಗೆ ಟಿಕೆಟ್ ನೀಡಿದ್ದರು. ಹಾಗಾಗಿ ಮುಲಾಯಂ ಅಂತಿಮಗೊಳಿಸಿದ್ದ ಅಭ್ಯರ್ಥಿ ಲೋಕ ದಳ ಪಕ್ಷದಿಂದ ಕಣಕ್ಕಿಳಿದಿದ್ದಾರೆ. ಅವರ ಪರವಾಗಿ ಮುಲಾಯಂ ಮತಯಾಚನೆ ಮಾಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...