alex Certify
ಕನ್ನಡ ದುನಿಯಾ       Mobile App
       

Kannada Duniya

ಆರ್.ಬಿ.ಐ. ಗೆ ನೂತನ ಗವರ್ನರ್

MUMBAI, INDIA - JANUARY 29: Dr. Urjit Patel (R), Deputy Governor of Reserve Bank of India, during the Third Quarter Review of Monetary Policy 2012-13, on January 29, 2013 in Mumbai, India. (Photo by Abhijit Bhatlekar/Mint via Getty Images)

ನವದೆಹಲಿ: ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ನೂತನ ಗವರ್ನರ್ ಆಗಿ ಉರ್ಜಿತ್ ಪಟೇಲ್ ನೇಮಕವಾಗಿದ್ದಾರೆ. ಪ್ರಸ್ತುತ ಗವರ್ನರ್ ಆಗಿರುವ ರಘುರಾಮ್ ರಾಜನ್ ಅವರ ಅವಧಿ ಕೊನೆಯಾಗುತ್ತಿರುವ ಹಿನ್ನಲೆಯಲ್ಲಿ ನೇಮಕಾತಿ ಮಾಡಲಾಗಿದೆ.

ಉರ್ಜಿತ್ ಪಟೇಲ್ ಪ್ರಸ್ತುತ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಉಪ ಗವರ್ನರ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಆರ್ಥಿಕ ಮತ್ತು ಬ್ಯಾಂಕಿಂಗ್ ಕ್ಷೇತ್ರದಲ್ಲಿ ಉರ್ಜಿತ್ ಪಟೇಲ್ ಸಾಧನೆ ಮಾಡಿದ್ದಾರೆ. ಅವರು ಅಮೆರಿಕದ ಯಾಲೆ ವಿಶ್ವವಿದ್ಯಾಲಯದಲ್ಲಿ ಪಿ.ಹೆಚ್.ಡಿ. ಪದವಿ ಪಡೆದುಕೊಂಡಿದ್ದಾರೆ. ಪ್ರಸ್ತುತ ಆರ್.ಬಿ.ಐ. ಡೆಪ್ಯುಟಿ ಗವರ್ನರ್ ಆಗಿ ಕೆಲಸ ಮಾಡುತ್ತಿರುವ ಅವರನ್ನು ರಘುರಾಮ್ ರಾಜನ್ ಅವರಿಂದ ತೆರವಾಗಲಿರುವ ಸ್ಥಾನಕ್ಕೆ ನೇಮಕ ಮಾಡಲಾಗಿದೆ.

ಮುಂದಿನ ತಿಂಗಳು ರಘುರಾಮ್ ರಾಜನ್ ಅವರ ಅವಧಿ ಕೊನೆಯಾಗಲಿದೆ. ಸೆಪ್ಟಂಬರ್ 4 ರಂದು ಉರ್ಜಿತ್ ಪಟೇಲ್ ಅಧಿಕಾರ ವಹಿಸಿಕೊಳ್ಳಲಿದ್ದಾರೆ. ಉರ್ಜಿತ್ ಪಟೇಲ್ ಆರ್ಥಿಕ ಕ್ಷೇತ್ರದಲ್ಲಿ ಅನುಭವಿಯಾಗಿದ್ದು, ಸೆಪ್ಟಂಬರ್ ನಿಂದ ಹೊಸ ಸಾರಥ್ಯ ವಹಿಸಿಕೊಳ್ಳಲಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...