alex Certify
ಕನ್ನಡ ದುನಿಯಾ       Mobile App
       

Kannada Duniya

ಪಿಯುಸಿ ಪಾಸ್ ಆದವರಿಗೆ ಇಲ್ಲಿದೆ ಸುವರ್ಣ ಅವಕಾಶ

ಯೂನಿಯನ್ ಪಬ್ಲಿಕ್ ಸರ್ವಿಸ್ ಕಮಿಷನ್ (ಯುಪಿಎಸ್ಸಿ) ರಾಷ್ಟ್ರೀಯ ರಕ್ಷಣಾ ಅಕಾಡೆಮಿ ಮತ್ತು ನೌಕಾ ರಕ್ಷಣಾ ಅಕಾಡೆಮಿ ಪರೀಕ್ಷೆ (ಐ)ಗೆ 2018 ಅಧಿಸೂಚನೆ ಹೊರಡಿಸಿದೆ. ಈ ಪರೀಕ್ಷೆ ಮೂಲಕ 415 ಅಭ್ಯರ್ಥಿಗಳಿಗೆ ಕೆಲಸ ಸಿಗಲಿದೆ. ಈ ಪರೀಕ್ಷೆಗೆ ಅರ್ಜಿ ಸಲ್ಲಿಸುವ ಪ್ರಕ್ರಿಯೆ ಶುರುವಾಗಿದೆ. ಅರ್ಜಿ ಸಲ್ಲಿಸಲು ಫೆಬ್ರವರಿ 5, 2018 ಕೊನೆ ದಿನವಾಗಿದೆ.

ಎನ್ಡಿಎ ವಾಯಪಡೆ, ಸೈನ್ಯ ಮತ್ತು ನೌಕಾ ವಿಂಗ್  ಪ್ರವೇಶಕ್ಕಾಗಿ ಪರೀಕ್ಷೆ ಏಪ್ರಿಲ್ 22, 2018 ರಂದು ನಡೆಯಲಿದೆ.

ಭೂ ಸೇನೆಯಲ್ಲಿ 208, ನೌಕಾಪಡೆಯಲ್ಲಿ 60 ಹಾಗೂ ವಾಯು ಸೇನೆಯಲ್ಲಿ 92 ಪೋಸ್ಟ್ ಗಳಿಗೆ ಈ ಪರೀಕ್ಷೆ ನಡೆಯಲಿದೆ.

ಶಿಕ್ಷಣ : ಆರ್ಮಿಗಾಗಿ ಮಾನ್ಯತೆ ಪಡೆದ ಶಿಕ್ಷಣ ಸಂಸ್ಥೆಯಿಂದ 10+2 ಮುಗಿಸಿರಬೇಕು. ಏರ್ ಪೋರ್ಸ್ ಹಾಗೂ ನೌಕಾ ಪಡೆಗೆ ಅಭ್ಯರ್ಥಿಗಳು ಭೌತಶಾಸ್ತ್ರ ಮತ್ತು ಗಣಿತದ ಜೊತೆ 12ನೇ ತರಗತಿ ಪಾಸ್ ಮಾಡಿರಬೇಕು.

ವಯಸ್ಸಿನ ಮಿತಿ : ಪರೀಕ್ಷೆ ಕುಳಿತುಕೊಳ್ಳುವ ಅಭ್ಯರ್ಥಿಗಳ ಜನ್ಮದಿನಾಂಕ 02/07/1999 ರಿಂದ 01/07/2002ರೊಳಗಿರಬೇಕು.

ಆಯ್ಕೆ ಪ್ರಕ್ರಿಯೆ: ಅಭ್ಯರ್ಥಿಗಳನ್ನು ಲಿಖಿತ ಪರೀಕ್ಷೆ / ಎಸ್ಎಸ್ಬಿ ಪರೀಕ್ಷೆ / ಸಂದರ್ಶನದ ಮೂಲಕ ಆಯ್ಕೆ ಮಾಡಲಾಗುತ್ತದೆ.

www.upsconline.nic.inನಲ್ಲಿ ಆಸಕ್ತ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದಾಗಿದೆ.

ಶುಲ್ಕ: ಈ ಕೆಲಸಕ್ಕೆ ಅರ್ಜಿ ಸಲ್ಲಿಸಲು, ಸಾಮಾನ್ಯ / ಓಬಿಸಿ ವರ್ಗದಲ್ಲಿ ಅಭ್ಯರ್ಥಿಗಳು 100 ರೂಪಾಯಿಗಳನ್ನು ಪಾವತಿಸಬೇಕಾಗುತ್ತದೆ. ಎಸ್ಸಿ / ಎಸ್ಟಿ / ಮಹಿಳಾ ಅಭ್ಯರ್ಥಿಗಳು ಯಾವುದೇ ಅರ್ಜಿ ಶುಲ್ಕವನ್ನು ಪಾವತಿಸಬೇಕಾಗಿಲ್ಲ.

Subscribe Newsletter

Get latest updates on your inbox...

Opinion Poll

  • ಅತಂತ್ರ ವಿಧಾನಸಭೆ ಸೃಷ್ಟಿಯಾದ ಬಳಿಕ ರಾಜ್ಯದಲ್ಲಿ ಆರಂಭವಾಗಿದೆಯಾ ಶಾಸಕರ ಕುದುರೆ ವ್ಯಾಪಾರ?

    View Results

    Loading ... Loading ...