alex Certify
ಕನ್ನಡ ದುನಿಯಾ       Mobile App
       

Kannada Duniya

ಶಾಕಿಂಗ್: ಈ ಕೆಲಸ ಮಾಡದಿದ್ದಲ್ಲಿ ರದ್ದಾಗಲಿದೆ ಗ್ಯಾಸ್ ಕನೆಕ್ಷನ್

ಡಿಸೆಂಬರ್ 1ರಿಂದ ಸುಮಾರು 1 ಕೋಟಿ ಗ್ಯಾಸ್ ಕನೆಕ್ಷನ್ ರದ್ದಾಗಲಿದೆ. KYC ಮಾಡದ ಗ್ರಾಹಕರ ಗ್ಯಾಸ್ ಕನೆಕ್ಷನ್ ಗೆ ಸರ್ಕಾರ ಕತ್ತರಿ ಹಾಕಲಿದೆ. ಡಿಸೆಂಬರ್ ಒಂದರ ನಂತ್ರ ಕೆವೈಸಿ ಅಪ್ಡೇಟ್ ಮಾಡದ ಗ್ರಾಹಕರಿಗೆ ಗ್ಯಾಸ್ ಸಿಗುವುದಿಲ್ಲ.

ಸರ್ಕಾರ, ಗ್ಯಾಸ್ ಕಂಪನಿಗಳಾದ ಭಾರತ್ ಗ್ಯಾಸ್, ಹೆಚ್ಪಿ ಗ್ಯಾಸ್, ಇಂಡೆನ್ ಗ್ಯಾಸ್ ಗೆ ಎಲ್ಲ ಗ್ರಾಹಕರ KYC ಪೂರ್ಣಗೊಳಿಸಲು ನವೆಂಬರ್ 30 ರವರೆಗೆ ಕಾಲಾವಕಾಶ ನೀಡಿದೆ. ಈವರೆಗೂ ಅನೇಕ ಗ್ರಾಹಕರು KYC ಫಾರ್ಮ್ ಪೂರ್ಣಗೊಳಿಸಿಲ್ಲ.ಗ್ರಾಹಕರಿಗೆ ನವೆಂಬರ್ 30ರವರೆಗೆ KYC ಭರ್ತಿಗೆ ಅವಕಾಶವಿದೆ. ಆನಂತ್ರ ಗ್ಯಾಸ್ ಕನೆಕ್ಷನ್ ಕಡಿದುಕೊಳ್ಳಬೇಕಾಗುತ್ತದೆ.

ಮಾಧ್ಯಮಗಳ ವರದಿ ಪ್ರಕಾರ, ಕೇಂದ್ರ ಸರ್ಕಾರ, ಗ್ಯಾಸ್ ಕಂಪನಿಗಳ ಬಳಿ KYC ಅಡಿಯಲ್ಲಿ ಆಧಾರ್ ನಂಬರ್ ನೀಡದ ಹಾಗೂ ಗಿವ್ ಇಟ್ ಅಪ್ ಸ್ಕೀಮ್ ಅಳವಡಿಸಿಕೊಳ್ಳದ ಗ್ರಾಹಕರ ಬಗ್ಗೆ ವರದಿ ಕೇಳಿದೆ. ಸರ್ಕಾರ ಮೂರು ವರ್ಷಗಳ ಹಿಂದೆಯೇ ಗ್ಯಾಸ್ ಕನೆಕ್ಷನ್ ಪಡೆದವರು ಬ್ಯಾಂಕ್ ಖಾತೆ ವಿವರ ನೀಡುವಂತೆ ಸೂಚನೆ ನೀಡಿದೆ. ನೇರವಾಗಿ ಸಬ್ಸಿಡಿ ಬ್ಯಾಂಕ್ ಖಾತೆಗೆ ಹೋಗಲಿ ಎನ್ನುವುದು ಸರ್ಕಾರದ ಉದ್ದೇಶ. ಆದ್ರೆ ಈವರೆಗೆ ಅನೇಕರು ಬ್ಯಾಂಕ್ ಖಾತೆ ವಿವರ ನೀಡಿಲ್ಲ. ಸಬ್ಸಿಡಿ ಲಾಭ ಪಡೆಯುತ್ತಿಲ್ಲ.

ಮಾಧ್ಯಮಗಳ ವರದಿ ಪ್ರಕಾರ 1 ಕೋಟಿ ಜನರು KYC ಅಪ್ಡೇಟ್ ಮಾಡಿಲ್ಲವಂತೆ. ದೆಹಲಿ, ಮಹಾರಾಷ್ಟ್ರ ಹಾಗೂ ಉತ್ತರ ಪ್ರದೇಶದ ಜನರು ಇದ್ರಲ್ಲಿ ಮುಂದಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...