alex Certify
ಕನ್ನಡ ದುನಿಯಾ       Mobile App
       

Kannada Duniya

ಮೊಟ್ಟೆ ದುಬಾರಿಯಾಗಲು ಇದು ಕಾರಣ….

ಕೋಳಿ ಮೊಟ್ಟೆ ಕೂಡ ಈಗ ಜನರ ಕೈಗೆಟುಕದಂತಾಗಿದೆ. ದಿನೇ ದಿನೇ ಮೊಟ್ಟೆ ಬೆಲೆ ಏರಿಕೆಯಾಗ್ತಿದ್ದು, ಈಗ ಒಂದು ಮೊಟ್ಟೆಯ ಬೆಲೆ 7 ರೂಪಾಯಿ ಆಗಿದೆ. ಮುಂಬೈನ ಕೋಳಿ ಸಾಕಣಿಕಾ ಕೇಂದ್ರಗಳಲ್ಲಿ ಅಕ್ಟೋಬರ್ ತಿಂಗಳಲ್ಲಿ 100 ಮೊಟ್ಟೆಗಳನ್ನು 422 ರೂಪಾಯಿಗೆ ಮಾರಾಟ ಮಾಡಲಾಗುತ್ತಿತ್ತು.

ಆದ್ರೀಗ 100 ಮೊಟ್ಟೆಗಳಿಗೆ ಹೋಲ್ ಸೇಲ್ ದರವೇ 582 ರೂಪಾಯಿಗೆ ತಲುಪಿದೆ. ಇದ್ರಿಂದಾಗಿ ಒಂದು ಮೊಟ್ಟೆಯ ಬೆಲೆ 6.5 – 7.5 ರೂಪಾಯಿ ಆಗಿದೆ. ಒಂದು ಕೆಜಿ ಮೊಟ್ಟೆಗೆ ಈಗ ಸರಿಸುಮಾರು 120-135 ರೂಪಾಯಿ. ಚಿಕನ್ ದರ ಕೂಡ ಅಂದಾಜು 130-150 ರೂಪಾಯಿ ಇದ್ದು, ಮೊಟ್ಟೆಗಿಂತ ಚಿಕನ್ ತಿನ್ನುವುದೇ ಅಗ್ಗ ಎನಿಸಿದೆ.

ಮೊಟ್ಟೆ ಬೆಲೆ ಏರಿಕೆಗೆ ಪ್ರಮುಖ ಕಾರಣ,

ತರಕಾರಿ ಬೆಲೆಯಲ್ಲಿ ಹೆಚ್ಚಳ : ತರಕಾರಿ ಬೆಲೆ ಕೂಡ ಗಗನಕ್ಕೇರಿದೆ. ಹಾಗಾಗಿ ಸಹಜವಾಗಿಯೇ ಮೊಟ್ಟೆಗಳಿಗೆ ಬೇಡಿಕೆಯೂ ಹೆಚ್ಚಾಗಿದೆ. ಬೇಡಿಕೆಗೆ ತಕ್ಕಷ್ಟು ಪೂರೈಕೆ ಇಲ್ಲದೇ ಇರೋದ್ರಿಂದ ಬೆಲೆ ಹೆಚ್ಚಳವಾಗಿದೆ.

ಕಡಿಮೆ ಉತ್ಪಾದನೆ : ನ್ಯಾಶನಲ್ ಎಗ್ ಕೋ ಆರ್ಡಿನೇಶನ್ ಕಮಿಟಿಯ ಪ್ರಕಾರ ತಮಿಳುನಾಡಿನ ನಮಕ್ಕಲ್ ವಲಯದಲ್ಲಿ 2017ರ ಜುಲೈನಲ್ಲಿ 2.88 ಕೋಟಿ ಮೊಟ್ಟೆಗಳ ಉತ್ಪಾದನೆಯಾಗಿತ್ತು. ಈ ಪ್ರಮಾಣ ಆಗಸ್ಟ್ ನಲ್ಲಿ 2.87 ಕೋಟಿಗೆ ಕುಸಿದಿದೆ. ಸೆಪ್ಟೆಂಬರ್ ನಲ್ಲಿ 2.84 ಕೋಟಿ ಹಾಗೂ ಅಕ್ಟೋಬರ್ ನಲ್ಲಿ 2.81 ಕೋಟಿ ಮೊಟ್ಟೆಗಳು ಉತ್ಪಾದನೆಯಾಗಿವೆ.

ಚಳಿಗಾಲದಲ್ಲಿ ಮೊಟ್ಟೆ ದುಬಾರಿಯಾಗಿದ್ದು ಇದೇ ಮೊದಲೇನಲ್ಲ. ಹಿಂದೆಯೂ ಕೂಡ ಈ ರೀತಿ ಆಗಿರುವ ಉದಾಹರಣೆಗಳಿವೆ. ಚಳಿಗಾಲದಲ್ಲಿ ಕೋಳಿಗಳು ಮೊಟ್ಟೆ ಇಡಲು ಬಹಳ ಸಮಯ ತೆಗೆದುಕೊಳ್ಳುತ್ತವೆ ಎನ್ನುತ್ತಾರೆ ವ್ಯಾಪಾರಿಗಳು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...