alex Certify
ಕನ್ನಡ ದುನಿಯಾ       Mobile App
       

Kannada Duniya

ಅಂಬಾನಿಯವರ ಮತ್ತೊಬ್ಬ ಪುತ್ರನಿಗೂ ಕೂಡಿ ಬಂತಾ ಕಂಕಣ…?

ಭಾರತದ ಅತಿ ಶ್ರೀಮಂತ ಉದ್ಯಮಿ ಮುಕೇಶ್ ಅಂಬಾನಿಯವರ ಮೂರನೇ ಪುತ್ರ ಅನಂತ್ ಅಂಬಾನಿ ನಿಶ್ಚಿತಾರ್ಥಕ್ಕೆ ಸಜ್ಜಾಗಿದ್ದಾರೆಯೇ ಎನ್ನುವ ಗುಸುಗುಸು ಮಾತುಗಳು ಆರಂಭಗೊಂಡಿವೆ.

ಇಟಲಿಯಲ್ಲಿ ನಡೆದ ಸಹೋದರಿ ಇಶಾ ಅಂಬಾನಿ ಹಾಗೂ ಆನಂದ್ ಪಿರಾಮಲ್ ಅವರ ಎಂಗೆಜ್ಮೆಂಟ್ ಕಾರ್ಯಕ್ರಮದಲ್ಲಿ, ಅಂಬಾನಿ ಪುತ್ರ ಅನಂತ್, ಸ್ನೇಹಿತೆ ರಾಧಿಕ ಮರ್ಚೆಂಟ್ ಅವರ ಕೈ ಹಿಡಿದುಕೊಂಡು ಬಂದಿರುವ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಕಾಣಿಸಿಕೊಂಡಿದ್ದು, ಇದಕ್ಕೆ ಪುಷ್ಠಿ ನೀಡಿವೆ.

ಆಂಕರ್ ಹೆಲ್ತ್ ಕೇರ್ ಉಪಾಧ್ಯಕ್ಷ ವೀರೇನ್ ಮರ್ಚೆಂಟ್ ಅವರ ಪುತ್ರಿಯಾಗಿರುವ ರಾಧಿಕ ಅವರನ್ನು ಅನಂತ್ ಇಷ್ಟಪಡುತ್ತಿದ್ದಾರೆ. ಆದ್ದರಿಂದ ಕೆಲವೇ ದಿನದಲ್ಲಿ ನಿಶ್ಚಿತಾರ್ಥ ಮಾಡಿಕೊಳ್ಳಲಿದ್ದಾರೆ ಎನ್ನುವ ಮಾತುಗಳು ಸಾಮಾಜಿಕ ಜಾಲತಾಣದಲ್ಲಿ ಕೇಳಿಬಂದರೂ, ಇದನ್ನು ಅಂಬಾನಿ ಕುಟುಂಬ ದೃಢೀಕರಿಸಿಲ್ಲ. ಆದರೆ ನಿಶ್ಚಿತಾರ್ಥ ಕಾರ್ಯಕ್ರಮದಲ್ಲಿ ಮುಕೇಶ್ ಅಂಬಾನಿ ತಮ್ಮ ಪುತ್ರಿ ಇಶಾ ಅವರ ಕೈಹಿಡಿದುಕೊಂಡು ಕರೆದುಕೊಂಡು ಆನಂದ್ ಬಳಿ ಬರುವಾಗ, ಅವರ ಹಿಂದೆ ರಾಧಿಕಾ ಕೈಹಿಡಿದುಕೊಂಡು ಅನಂತ್ ಬರುತ್ತಿರುವುದು ಈ ಅನುಮಾನಗಳಿಗೆ ಕಾರಣವಾಗಿದೆ.

ಕಳೆದ ವರ್ಷ ಮಹಾಬಲೇಶ್ವರ ದೇವಾಲಯದಲ್ಲಿ ಆನಂತ್, ಇಶಾ ಬಳಿ ಪ್ರೇಮ ನಿವೇದನೆ ಮಾಡಿಕೊಂಡಿದ್ದರು. ಆದ್ದರಿಂದ ಎರಡು ಕುಟುಂಬಗಳು ಒಪ್ಪಿ ಇಶಾ ಜತೆ ಆನಂದ್ ನಿಶ್ಚಿತಾರ್ಥವನ್ನು ಇಟಲಿಯ ಕೋಮೊ ನದಿ ದಂಡೆಯಲ್ಲಿ ಆಯೋಜಿಸಿತ್ತು. ಕಾರ್ಯಕ್ರಮಕ್ಕೆ ಬಾಲಿವುಡ್ ನಟ ಅನಿಲ್ ಕಪೂರ್, ಪ್ರಿಯಾಂಕಾ ಚೋಪ್ರಾ ಸೇರಿದಂತೆ ಹಲವು ಗಣ್ಯರು ಆಗಮಿಸಿದ್ದರು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...