alex Certify
ಕನ್ನಡ ದುನಿಯಾ       Mobile App
       

Kannada Duniya

2016 ರಲ್ಲಿ ನಡೆದ ಅನಿರೀಕ್ಷಿತ ಘಟನೆಗಳು….

download

2016 ರಲ್ಲಿ ಅನೇಕ ಅನಿರೀಕ್ಷಿತ ಘಟನೆಗಳು ನಡೆದಿವೆ. ಸರ್ಜಿಕಲ್ ಸ್ಟ್ರೈಕ್ ನಿಂದ ಹಿಡಿದು ನೋಟು ನಿಷೇಧದವರೆಗೆ ಅನೇಕ ದೊಡ್ಡ ದೊಡ್ಡ ಘಟನೆಗಳು ಘಟಿಸಿವೆ. ಇದು ದೇಶದ ಪ್ರತಿಯೊಬ್ಬ ನಾಗರೀಕನ ಮೇಲೂ ಪರಿಣಾಮ ಬೀರಿದೆ. ಜೊತೆಗೆ ವಿಶ್ವದಾದ್ಯಂತ ಸುದ್ದಿ, ಸದ್ದು ಎರಡನ್ನೂ ಮಾಡಿದೆ.

2016 ರಲ್ಲಿ ನಡೆದ ಅನಿರೀಕ್ಷಿತ ಘಟನೆಗಳು :

ನೋಟು ನಿಷೇಧ : ನವೆಂಬರ್ 8,2016. ಸ್ವಾತಂತ್ರ್ಯದ ನಂತ್ರ ದೇಶದಲ್ಲಿ ಎಲ್ಲೆ ಮೀರಿದ್ದ ಭ್ರಷ್ಟಾಚಾರ, ಭಯೋತ್ಪಾದನೆ ನಿಯಂತ್ರಣಕ್ಕೆ ಕೇಂದ್ರ ಸರ್ಕಾರ ಮಹತ್ವದ ನಿರ್ಧಾರ ಕೈಗೊಂಡಿದೆ. 500 ಹಾಗೂ ಸಾವಿರ ಮುಖ ಬೆಲೆಯ ನೋಟುಗಳ ಮೇಲೆ ನಿಷೇಧ ಹೇರಿ ಹೊಸ 2 ಸಾವಿರ ಮುಖ ಬೆಲೆಯ ನೋಟುಗಳನ್ನು ಚಲಾವಣೆಗೆ ತಂದಿದೆ.

ಉರಿ ದಾಳಿ : ಸೆಪ್ಟೆಂಬರ್ 18,2016. ಜಮ್ಮು-ಕಾಶ್ಮೀರದ ಉರಿ ಪಟ್ಟಣದ ಸಮೀಪ ನಾಲ್ವರು ಭಯೋತ್ಪಾದಕರಿಂದ ಆತ್ಮಾಹುತಿ ದಾಳಿ. 17 ಯೋಧರ ವೀರ ಮರಣ. 6 ಭಾರತೀಯ ಯೋಧರಿಗೆ ಗಾಯ.

ಸರ್ಜಿಕಲ್ ಸ್ಟ್ರೈಕ್ : ಸೆಪ್ಟೆಂಬರ್ 28, 2016. ಉರಿ ದಾಳಿ ನಂತ್ರ ಪಾಕ್ ಆಕ್ರಮಿತ ಕಾಶ್ಮೀರದ ಮೇಲೆ ಭಾರತೀಯ ಸೈನಿಕರ ದಾಳಿ. ಅಲ್ಲಿ ನೆಲೆ ಕಂಡುಕೊಂಡಿದ್ದ 40-50 ಉಗ್ರರ ಹತ್ಯೆ ಮಾಡುವ ಮೂಲಕ ಸೇಡು ತೀರಿಸಿಕೊಂಡ ಭಾರತ.

ಜಯಲಲಿತಾ ನಿಧನ : ಡಿಸೆಂಬರ್ 5,2016. ತಮಿಳುನಾಡು ಸಿಎಂ ಜಯಲಲಿತಾ ನಿಧನ. 74 ದಿನಗಳವರೆಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದ ಸಿಎಂ ವಾಪಸ್ ಬರಲೇ ಇಲ್ಲ. ‘ಅಮ್ಮ’ ನ ಸಾವಿನಿಂದ ಮನನೊಂದು 200ಕ್ಕೂ ಹೆಚ್ಚು ಮಂದಿ ತಮಿಳುನಾಡಿನಲ್ಲಿ ಸಾವನ್ನಪ್ಪಿದ್ದಾರೆ.

ಕಾವೇರಿ ಗಲಾಟೆ : ಕಾವೇರಿ ನದಿ ನೀರು ಹಂಚಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಸೆಪ್ಟೆಂಬರ್ ನಲ್ಲಿ ಕರ್ನಾಟಕದಲ್ಲಿ ದೊಡ್ಡ ಮಟ್ಟದ ಪ್ರತಿಭಟನೆ, ಬಂದ್ ನಡೆದಿದೆ. ಈ ವೇಳೆ ಅನೇಕ ಲಾರಿಗಳು ಬೆಂಕಿಗಾಹುತಿಯಾಗಿವೆ. ತಮಿಳುನಾಡಿನಲ್ಲಿ ಕೂಡ ಗಲಾಟೆಯಾಗಿದ್ದು, ಕೆಲವರು ಸಾವನ್ನಪ್ಪಿದ್ದಾರೆ.

 

Subscribe Newsletter

Get latest updates on your inbox...

Opinion Poll

  • ವಿಐಪಿ ಕಾರ್ ಮೇಲಿನ ಕೆಂಪು ದೀಪ ತೆರವುಗೊಳಿಸಿದರೆ ಸಾರ್ವಜನಿಕರ ಸಮಸ್ಯೆಗೆ ಪರಿಹಾರ ಸಿಗಲಿದೆಯೇ..?

    View Results

    Loading ... Loading ...