alex Certify
ಕನ್ನಡ ದುನಿಯಾ       Mobile App
       

Kannada Duniya

ಗುಡ್ ನ್ಯೂಸ್: ‘ಆಧಾರ್’ ಸುರಕ್ಷತೆ ಕುರಿತು ಆತಂಕಗೊಂಡಿದ್ದವರಿಗೆ ನೆಮ್ಮದಿ ನೀಡಿದ ಯುಐಡಿಎಐ

ಆಧಾರ್ ನೋಂದಣಿ ತಂತ್ರಾಂಶವನ್ನು ಹ್ಯಾಕ್ ಮಾಡಲಾಗಿದೆ ಎಂದು ಮಾಧ್ಯಮವೊಂದರಲ್ಲಿ ವರದಿಯಾಗಿರುವುದರ ಕುರಿತು ಸ್ಪಷ್ಟನೆ ನೀಡಿರುವ ಭಾರತೀಯ ವಿಶಿಷ್ಟ ಗುರುತು ಪ್ರಾಧಿಕಾರ, ಈ ಸಾಫ್ಟ್ ವೇರ್ ಅತ್ಯಂತ ಸುರಕ್ಷಿತವಾಗಿದೆ ಎಂದು ತಿಳಿಸಿದೆ.

ಆಧಾರ್ ನೋಂದಣಿ ಮಾಡುವವರು ಹಾಗೂ ನೊಂದಣಿ ಮಾಡಿಸುವವರ ಬಯೋಮೆಟ್ರಿಕ್ ಮಾಹಿತಿ ವಿವರಗಳನ್ನು ದಾಖಲಿಸಿದ ಬಳಿಕವಷ್ಟೇ ಈ ಸಾಫ್ಟ್ ವೇರ್ ಕಾರ್ಯ ನಿರ್ವಹಿಸುತ್ತದೆ. ಹೀಗಾಗಿ ಇದನ್ನು ದುರುಪಯೋಗಪಡಿಸಿಕೊಂಡು ನಕಲಿ ಆಧಾರ್ ನಂಬರ್ ಸೃಷ್ಟಿಸಲು ಸಾಧ್ಯವಿಲ್ಲವೆಂದು ಯುಐಡಿಎಐ ಹೇಳಿದೆ.

ಆಧಾರ್ ನೋಂದಣಿಗೆ ಬಳಸಲಾಗುತ್ತಿರುವ ಸಾಫ್ಟ್ ವೇರ್ ಅನ್ನು ದುಷ್ಕರ್ಮಿಗಳು ಹ್ಯಾಕ್ ಮಾಡಿ, ನಕಲಿ ಆಧಾರ್ ಸೃಷ್ಟಿಸಲು ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂದು ಮಾಧ್ಯಮವೊಂದರಲ್ಲಿ ತನಿಖಾ ವರದಿ ಪ್ರಕಟಗೊಂಡಿದ್ದು, ಇದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು. ಇದೀಗ ಇದಕ್ಕೆ ಸ್ಪಷ್ಟನೆ ನೀಡಿರುವ ಯುಐಡಿಎಐ, ಆಧಾರ್ ಸುರಕ್ಷತೆ ಕುರಿತು ನೆಮ್ಮದಿಯ ಸುದ್ದಿ ನೀಡಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...