alex Certify
ಕನ್ನಡ ದುನಿಯಾ       Mobile App
       

Kannada Duniya

ಗ್ರಾಹಕರಿಗೆ ಅರಿವಿಲ್ಲದಂತೆ ತೆರೆಯಲಾಗಿತ್ತು ಖಾತೆ…!

ಆಧಾರ್ ನಿಯಮವನ್ನು ಉಲ್ಲಂಘಿಸಿದ್ದಕ್ಕಾಗಿ ಭಾರ್ತಿ ಏರ್ಟೆಲ್ ವಿರುದ್ಧ ತನಿಖೆ ನಡೆಸುವಂತೆ ವಿಶಿಷ್ಟ ಗುರುತಿನ ಚೀಟಿ ಪ್ರಾಧಿಕಾರ ಆದೇಶ ನೀಡಿದೆ. ಗ್ರಾಹಕರ ಮೊಬೈಲ್ ನಂಬರ್ ಗಳೊಂದಿಗೆ ಆಧಾರ್ ವೆರಿಫಿಕೇಶನ್ ಮಾಡುವ ಸಂದರ್ಭದಲ್ಲಿ ಪೇಮೆಂಟ್ಸ್ ಬ್ಯಾಂಕ್ ಖಾತೆಗಳನ್ನು ರಹಸ್ಯವಾಗಿ ತೆರೆದಿರುವ ಏರ್ಟೆಲ್ ಗೆ ದಂಡವನ್ನೂ ವಿಧಿಸಿದೆ.

ಏರ್ಟೆಲ್ ಮಾಡಿರೋ ತಪ್ಪು ಗಂಭೀರ ಸ್ವರೂಪದ್ದು, ನಂಬಿಕೆ ಹಾಗೂ ಒಪ್ಪಂದವನ್ನು ಕಂಪನಿ ಉಲ್ಲಂಘಿಸಿರುವುದು ಸ್ಪಷ್ಟವಾಗಿದೆ ಅಂತಾ ಯುಐಡಿಎಐ ಹೇಳಿದೆ. ಗ್ರಾಹಕರಿಗೆ ಸರ್ಕಾರದಿಂದ ಸಿಗುವ ಎಲ್ ಪಿ ಜಿ ಸಬ್ಸಿಡಿ, ಸೇವಿಂಗ್ಸ್ ಬ್ಯಾಂಕ್ ಖಾತೆ ಬದಲು ಪೇಮೆಂಟ್ಸ್ ಬ್ಯಾಂಕ್ ನಲ್ಲಿ ಜಮಾ ಆಗಿರುವುದಾಗಿ ಮೆಸೇಜ್ ಬಂದಿತ್ತು.

ತಮಗೆ ಗೊತ್ತೇ ಇಲ್ಲದಂತೆ ಏರ್ಟೆಲ್ ಪೇಮೆಂಟ್ಸ್ ಬ್ಯಾಂಕ್ ನಲ್ಲಿ ರಹಸ್ಯವಾಗಿ ಖಾತೆ ತೆರೆದಿರುವುದನ್ನು ಗಮನಿಸಿದ ಗ್ರಾಹಕರು, ದೂರು ನೀಡಿದ್ದರು. ಹಾಗಾಗಿ ತನಿಖೆಗೆ ಆದೇಶ ನೀಡಲಾಗಿದ್ದು, ವರದಿ ಬಂದ ಬಳಿಕ ಏರ್ಟೆಲ್ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಯುಐಡಿಎಐ ಅಧಿಕಾರಿಗಳು ತಿಳಿಸಿದ್ದಾರೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...