alex Certify
ಕನ್ನಡ ದುನಿಯಾ       Mobile App
       

Kannada Duniya

ಆಧಾರ್ ಅಕ್ರಮದ ಬಗ್ಗೆ ವರದಿ ಮಾಡಿದ್ದ ಪತ್ರಿಕೆಗೆ ಸಂಕಷ್ಟ

ಆಧಾರ್ ನಂಬರ್ ಗಳನ್ನು ವಾಟ್ಸಪ್ ಮೂಲಕ ಮಾರಾಟ ಮಾಡಲಾಗ್ತಿದೆ ಎಂಬ ಬಗ್ಗೆ ವರದಿ ಮಾಡಿದ್ದ ದಿ ಟ್ರಿಬ್ಯೂನ್ ಪತ್ರಿಕೆ ಹಾಗೂ ಪತ್ರಕರ್ತನ ವಿರುದ್ಧ ಎಫ್ ಐ ಆರ್ ದಾಖಲಾಗಿದೆ. UIDAI ದೂರು ದಾಖಲು ಮಾಡಿದೆ. ರಚನಾ ಖೈರಾ ಎಂಬ ಪತ್ರಕರ್ತೆ ಈ ಬಗ್ಗೆ ವರದಿ ಮಾಡಿದ್ದಳು.

ಪ್ರಕರಣದ ಬಗ್ಗೆ ಈಗಾಗ್ಲೇ ತನಿಖೆ ಆರಂಭಿಸಿರುವುದಾಗಿ ಕ್ರೈಂ ಬ್ರಾಂಚ್ ನ ಜಂಟಿ ಆಯುಕ್ತ ಅಲೋಕ್ ಕುಮಾರ್ ತಿಳಿಸಿದ್ದಾರೆ. ಜನವರಿ 3ರಂದು ದಿ ಟ್ರಿಬ್ಯೂನ್ ಪತ್ರಿಕೆ ವರದಿ ಪ್ರಕಟಿಸಿತ್ತು. 500 ರೂಪಾಯಿ ಕೊಟ್ಟು ಖುದ್ದು ತಮ್ಮ ಪತ್ರಕರ್ತರೇ ಈ ಅಕ್ರಮವನ್ನು ಪತ್ತೆ ಮಾಡಿದ್ದಾರೆ ಅಂತಾ ಬರೆಯಲಾಗಿತ್ತು.

ಕೋಟ್ಯಾಂತರ ಆಧಾರ್ ವಿವರಗಳನ್ನು ತಿಳಿದುಕೊಳ್ಳಲು ಯಾರೋ ಅನಾಮಧೇಯರಿಗೆ ಹಣ ಕೊಟ್ಟು ಅವರು ನೀಡುವ ಸೇವೆಯನ್ನು ಖರೀದಿ ಮಾಡಿರುವುದು ಅಕ್ಷಮ್ಯ ಅಂತಾ UIDAI ದೂರಿನಲ್ಲಿ ಉಲ್ಲೇಖಿಸಿದೆ. ಇದು ಆಧಾರ್ ನಿಯಮದ ಉಲ್ಲಂಘನೆಯಾಗಿದ್ದು, ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...