alex Certify
ಕನ್ನಡ ದುನಿಯಾ       Mobile App
       

Kannada Duniya

ಆಧಾರ್ ಬಳಕೆದಾರರಿಗೊಂದು ಖುಷಿ ಸುದ್ದಿ

dfakxgduaaaptprಆಧಾರ್ ಅಪ್ಲಿಕೇಷನ್ ಬಿಡುಗಡೆಯಾಗಿದೆ. ಭಾರತದ ವಿಶಿಷ್ಟ ಗುರುತು ಪ್ರಾಧಿಕಾರ (ಯುಐಡಿಎಐ) ಆಂಡ್ರಾಯ್ಡ್ ಸ್ಮಾರ್ಟ್ಫೋನ್ ಗಳಿಗಾಗಿ mAadhaar ಆ್ಯಪ್ ಬಿಡುಗಡೆ ಮಾಡಿದೆ. ಇದನ್ನು ಉಚಿತವಾಗಿ ಡೌನ್ಲೋಡ್ ಮಾಡಬಹುದಾಗಿದೆ. ಈ ಅಪ್ಲಿಕೇಷನ್ ಮೂಲಕ ನೀವು ಸ್ಮಾರ್ಟ್ಫೋನ್ ನಲ್ಲಿಯೇ ನಿಮ್ಮ ಆಧಾರ್ ಕಾರ್ಡ್ ನ ಎಲ್ಲ ಮಾಹಿತಿ ಪಡೆಯಬಹುದಾಗಿದೆ.

ಆಧಾರ್ ಕಾರ್ಡ್ ನ ಅಧಿಕೃತ ಟ್ವೀಟರ್ ನಲ್ಲಿಯೇ ಈ ಬಗ್ಗೆ ಮಾಹಿತಿ ನೀಡಲಾಗಿದೆ. ಇನ್ಮುಂದೆ ಮೊಬೈಲ್ ನಲ್ಲಿಯೇ ಆಧಾರ್ ಕಾರ್ಡ್ ಕೊಂಡೊಯ್ಯಬಹುದೆಂದು ಟ್ವಿಟ್ ಮಾಡಲಾಗಿದೆ. ಈ ಆ್ಯಪ್ ನಲ್ಲಿ ನೀವು ಮೊದಲು ಆಧಾರ್ ದೃಢೀಕರಣ ಮಾಡಬೇಕಾಗುತ್ತದೆ.

ಹೆಸರು, ಹುಟ್ಟಿದ ದಿನ, ಲಿಂಗ, ಫೋಟೋ ಹಾಗೂ ವಿಳಾಸದ ಮಾಹಿತಿ ಕೇವಲ ಒಂದು ಕ್ಲಿಕ್ ನಲ್ಲಿ ಸಿಗಲಿದೆ. ಗೋಗಲ್ ಪ್ಲೇ ಸ್ಟೋರ್ ನಲ್ಲಿ ನೀವು ಈ ಅಪ್ಲಿಕೇಷನ್ ಡೌನ್ಲೋಡ್ ಮಾಡಿಕೊಳ್ಳಬೇಕು.

ಆ್ಯಪ್ ಡೌನ್ಲೋಡ್ ಆದ ನಂತ್ರ ಪಾಸ್ವರ್ಡ್ ಇಟ್ಟುಕೊಳ್ಳಬೇಕು. ನಂತ್ರ ಆಧಾರ್ ಕಾರ್ಡ್ ನಂಬರ್ ದಾಖಲೆ ಮಾಡಬೇಕು. ನಂತ್ರ ನಿಮ್ಮ ಮೊಬೈಲ್ ನಂಬರ್ ಹಾಕಬೇಕು. ಮೊಬೈಲ್ ನಲ್ಲಿ ಓಟಿಪಿ ಬರಲಿದೆ. ಅದನ್ನು ಮೊಬೈಲ್ ಅಪ್ಲಿಕೇಷನ್ ನಲ್ಲಿ ಹಾಕಿದ ನಂತ್ರವಷ್ಟೇ ನಿಮ್ಮ ಆಧಾರ್ ಕಾರ್ಡ್ ಕಾಣಿಸಲಿದೆ. ಸದ್ಯ ಇದು ಬೀಟಾ ಆವೃತ್ತಿಯಲ್ಲಿದ್ದು ಎಲ್ಲ ರೀತಿಯಲ್ಲಿಯೂ ಬಳಕೆ ಸಾಧ್ಯವಿಲ್ಲ. ಆಧಾರ್ ಕಾರ್ಡ್ ಜೊತೆ ಮೊಬೈಲ್ ನಂಬರ್ ರಿಜಿಸ್ಟರ್ ಆದವರಿಗೆ ಮಾತ್ರ ಈ ಸೌಲಭ್ಯ ಸಿಗಲಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...