alex Certify
ಕನ್ನಡ ದುನಿಯಾ       Mobile App
       

Kannada Duniya

ಏರ್ ಟೆಲ್ ಗ್ರಾಹಕರಿಗೆ ಶಾಕಿಂಗ್ ನ್ಯೂಸ್

ನವದೆಹಲಿ: ಏರ್ ಟೆಲ್ ಗ್ರಾಹಕರು ಸದ್ಯಕ್ಕೆ ಆಧಾರ್ ಜೋಡಣೆ ಮಾಡುವಂತಿಲ್ಲ ಎಂದು ಆಧಾರ್ ಪ್ರಾಧಿಕಾರ ಆದೇಶ ನೀಡಿದೆ.

ಏರ್ ಟೆಲ್ ನಂಬರ್ ಗಳನ್ನು ಬಳಸಿಕೊಂಡು ಕಾನೂನು ಬಾಹಿರವಾಗಿ ಏರ್ ಟೆಲ್ ಪೇಮೆಂಟ್ ಬ್ಯಾಂಕ್ ನಲ್ಲಿ ಏರ್ ಟೆಲ್ ಖಾತೆ ತೆರೆದಿದೆ.

ಸಿಮ್ ಬಳಕೆದಾರರಿಗೆ ಮಾಹಿತಿ ನೀಡದೇ ಪೇಮೆಂಟ್ ಬ್ಯಾಂಕ್ ನಲ್ಲಿ ಏರ್ ಟೆಲ್ ಖಾತೆ ತೆರೆದಿದ್ದು, ಈ ಕಾರಣದಿಂದ ಮೊಬೈಲ್ ಗ್ರಾಹಕರ ಆಧಾರ್ ಆಧಾರಿತ ಸಿಮ್ ಪರಿಶೀಲನೆ ನಡೆಸುವುದನ್ನು ತಾತ್ಕಾಲಿಕವಾಗಿ ತಡೆ ಹಿಡಿಯಲಾಗಿದೆ.

ಆಧಾರ್ ಇ.ಕೆ.ವೈ.ಸಿ. ಆಧಾರಿತ ಸಿಮ್ ಪರಿಶೀಲನೆ ಪ್ರಕ್ರಿಯೆಯನ್ನು ಬಳಸಿಕೊಂಡು ಭಾರ್ತಿ ಏರ್ ಟೆಲ್ ಚಂದಾದಾರರ ಒಪ್ಪಿಗೆ ಇಲ್ಲದೇ ಪೇಮೆಂಟ್ ಬ್ಯಾಂಕ್ ಖಾತೆಗಳನ್ನು ತೆರೆಯಲು ಅನುವು ಮಾಡಿಕೊಟ್ಟ ಹಿನ್ನಲೆಯಲ್ಲಿ ಆಧಾರ್ ಪ್ರಾಧಿಕಾರ ಈ ಆದೇಶ ನೀಡಿದೆ.

ಏರ್ ಟೆಲ್ ಪೇಮೆಂಟ್ ಬ್ಯಾಂಕ್ ಅನ್ನು ತಾತ್ಕಾಲಿಕವಾಗಿ ಅಮಾನತು ಮಾಡಲಾಗಿದೆ. ಈ ಖಾತೆಗಳನ್ನು ಎಲ್.ಪಿ.ಜಿ. ಸಬ್ಸಿಡಿ ಪಡೆದುಕೊಳ್ಳುವ ಗ್ರಾಹಕರಿಗೆ ಓಪನ್ ಮಾಡಲಾಗಿದೆ ಎಂಬ ಏರ್ ಟೆಲ್ ವಾದಕ್ಕೆ ಆಧಾರ್ ಪ್ರಾಧಿಕಾರ ಆಕ್ಷೇಪಿಸಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...