alex Certify
ಕನ್ನಡ ದುನಿಯಾ       Mobile App
       

Kannada Duniya

ಬ್ಯಾಂಕ್ ಖಾತೆ ತೆರೆಯುವವರಿಗೊಂದು ‘ಮುಖ್ಯ’ ಮಾಹಿತಿ…!

ಯಾವುದೇ ಬ್ಯಾಂಕ್ ನಲ್ಲಿ ಖಾತೆ ತೆರೆಯಲು ಪುರಾವೆ ಅಥವಾ ಶಾಶ್ವತ ವಿಳಾಸಕ್ಕಾಗಿ ಆಧಾರ್ ಕಾರ್ಡ್ ಫೋಟೋ ಕಾಪಿ ನೀಡಲಾಗ್ತಾಯಿತ್ತು. ಇನ್ಮುಂದೆ ಆಧಾರ್ ಫೋಟೋ ಕಾಪಿ ನೀಡಿ ಖಾತೆ ತೆರೆಯಲು ಸಾಧ್ಯವಿಲ್ಲ. ಬಯೋಮೆಟ್ರಿಕ್ ಅಥವಾ ಒಟಿಪಿ ದೃಢೀಕರಣವನ್ನೂ ನೀಡಬೇಕಾಗುತ್ತದೆ. ಈ ವಿಚಾರವನ್ನು ಯುಐಡಿಎಐ ಸ್ಪಷ್ಟಪಡಿಸಿದೆ.

ಮಾಹಿತಿ ಪ್ರಕಾರ, ಬ್ಯಾಂಕ್ ಒಟಿಪಿ ಅಥವಾ ಬಯೋಮೆಟ್ರಿಕ್ ದಾಖಲೆ ಪಡೆಯದೆ ಖಾತೆ ತೆರೆದ್ರೆ ಮುಂದಾಗುವ ನಷ್ಟಕ್ಕೆ ಬ್ಯಾಂಕ್ ಹೊಣೆ ಎಂದು ಯುಐಡಿಎಐ ಹೇಳಿದೆ.

ಬ್ಯಾಂಕಿನ ಈ ತಪ್ಪಿಗೆ ಆಧಾರ್ ಕಾರ್ಡ್ ಹೊಣೆಯಲ್ಲ. ಬೇರೆಯವರ ವೋಟರ್ ಐಡಿ ಅಥವಾ ರೇಷನ್ ಕಾರ್ಡ್ ಕಾಪಿ ಪಡೆದು ಈ ಹಿಂದೆ ಬ್ಯಾಂಕ್ ಖಾತೆ ತೆರೆಯಲಾಗ್ತಾಯಿತ್ತು. ಆಧಾರ್ ಕಾರ್ಡ್ ಫೋಟೋ ಕಾಪಿ ಪಡೆದು ಖಾತೆ ತೆರೆದ್ರೆ ಅದಕ್ಕೂ ಇದಕ್ಕೂ ಯಾವುದೇ ವ್ಯತ್ಯಾಸವಿರುವುದಿಲ್ಲ. ಇದ್ರಲ್ಲಿ ಕಾರ್ಡ್ ದಾರನ ತಪ್ಪಿರುವುದಿಲ್ಲವೆಂದು ಯುಐಡಿಎಐ ಹೇಳಿದೆ.

ಯುಐಡಿಎಐ ವೆಬ್ಸೈಟ್ ನಲ್ಲಿ ಈ ಬಗ್ಗೆ ಪ್ರಶ್ನೆ ಕೇಳಲಾಗಿತ್ತು. ನನಗೆ ಗೊತ್ತಿಲ್ಲದೆ ಆಧಾರ್ ಕಾರ್ಡ್ ಫೋಟೋ ಕಾಪಿ ಪಡೆದು ಬೇರೆಯವರು ಖಾತೆ ತೆರೆಯಬಹುದಾ ಎಂದು ಪ್ರಶ್ನೆ ಮಾಡಲಾಗಿತ್ತು. ಇದಕ್ಕೆ ಯುಐಡಿಎಐ ಉತ್ತರ ನೀಡಿದೆ. ಖಾತೆಯನ್ನು ಫೋಟೋ ಕಾಪಿ ಮಾತ್ರ ನೀಡಿ ತೆರೆಯಲು ಸಾಧ್ಯವಿಲ್ಲ ಎಂದಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...