alex Certify
ಕನ್ನಡ ದುನಿಯಾ       Mobile App
       

Kannada Duniya

5 ವರ್ಷಕ್ಕಿಂತ ಕೆಳಗಿನ ಮಕ್ಕಳ ಆಧಾರ್ ಕಾರ್ಡ್ ಗೆ ಬೇಕು ಈ ದಾಖಲೆ

ಆಧಾರ್ ನಮ್ಮ ದೇಶದ ಅತ್ಯಗತ್ಯ ಗುರುತಿನ ದಾಖಲೆಯಾಗಿದೆ. ಈಗ ಎಲ್ಲರ ಕೈನಲ್ಲೂ ಆಧಾರ್ ಇರಲೇಬೇಕು. ಎಲ್ಲ ಸೇವೆಗಳಿಗೆ ಆಧಾರ್ ಕಡ್ಡಾಯ ಮಾಡಲಾಗ್ತಿದೆ. ಮಕ್ಕಳಿಗೆ ಕೂಡ ಆಧಾರ್ ಅನಿವಾರ್ಯವಾಗ್ತಿದೆ. ಬಹುತೇಕ ಶಾಲೆಗಳಲ್ಲಿ ಆಧಾರ್ ಕಾರ್ಡನ್ನು ದಾಖಲೆ ರೂಪದಲ್ಲಿ ಕೇಳುತ್ತಿದ್ದಾರೆ.

5 ವರ್ಷಕ್ಕಿಂತ ಕೆಳಗಿನ ಮಕ್ಕಳಿಗೆ ಆಧಾರ್ ಕಾರ್ಡ್ ಮಾಡಿಸುವ ಬಗ್ಗೆ ಪಾಲಕರಲ್ಲಿ ಅನೇಕ ಪ್ರಶ್ನೆಗಳಿದೆ. 5 ವರ್ಷಕ್ಕಿಂತ ಕೆಳ ಮಕ್ಕಳಿಗೆ ಬಯೋಮೆಟ್ರಿಕ್ ಇರುವುದಿಲ್ಲ. ಅಂದ್ರೆ ಫಿಂಗರ್ಫ್ರಿಂಟ್ ಹಾಗೂ ಕಣ್ಣಿನ ರೆಟಿನಾ ಪಡೆಯುವುದಿಲ್ಲ. ಹಾಗಾಗಿ ಐದು ವರ್ಷಕ್ಕಿಂತ ಕೆಳ ವಯಸ್ಸಿನ ಮಕ್ಕಳ ಆಧಾರ್, ತಂದೆ-ತಾಯಿ ಆಧಾರ್  ಜೊತೆ ಲಿಂಕ್ ಆಗುತ್ತದೆ.

ಐದು ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗೆ ಆಧಾರ್ ಮಾಡಿಸಲು ಪಾಲಕರು ತಮ್ಮ ಆಧಾರ್ ಕಾರ್ಡ್ ಜೊತೆ ಮಕ್ಕಳನ್ನು ಸೆಂಟರ್ ಗೆ ಕರೆದೊಯ್ಯಬೇಕಾಗುತ್ತದೆ. ಮಕ್ಕಳಿಗೆ ಐದು ವರ್ಷವಾಗ್ತಿದ್ದಂತೆ ಬಯೋ ಮೆಟ್ರಿಕ್ ದಾಖಲೆಗಳನ್ನು ನೀಡಿ ಪ್ರತ್ಯೇಕವಾಗಿ ಆಧಾರ್ ಕಾರ್ಡ್ ಮಾಡಿಸಬೇಕಾಗುತ್ತದೆ. ಮಕ್ಕಳ ಜನನ ದಾಖಲೆ ಜೊತೆಗೆ ತಂದೆ ಅಥವಾ ತಾಯಿಯ ಆಧಾರ್ ಕಾರ್ಡ್ ಅವಶ್ಯಕವಾಗಿ ಬೇಕು. ಇಬ್ಬರಲ್ಲಿ ಒಬ್ಬರ ಬಳಿ ಆಧಾರ್ ಕಾರ್ಡ್ ಇದ್ದರೆ ಸಾಕು. ಆಧಾರ್ ಹೊಂದಿರುವ ತಾಯಿ ಅಥವಾ ತಂದೆ ಮಕ್ಕಳ ಜೊತೆ ಆಧಾರ್ ಸೆಂಟರ್ ಗೆ ಹೋಗಿ ಅರ್ಜಿ ಸಲ್ಲಿಸಬೇಕಾಗುತ್ತದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...