alex Certify
ಕನ್ನಡ ದುನಿಯಾ       Mobile App
       

Kannada Duniya

ಪತಂಜಲಿ ಹೆಸರಲ್ಲಿ ಉದ್ಯಮಿಗೆ ವಂಚನೆ

Handcuffs frame the word 'fraud' among newspaper cuttings

ಉಡುಪಿ: ಪತಂಜಲಿ ಆಯುರ್ವೇದಿಕ್ ಕಂಪನಿಯ ಹೆಸರಲ್ಲಿ ಉದ್ಯಮಿಗೆ ವಂಚಿಸಿದ ಘಟನೆ ನಡೆದಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಮಲ್ಪೆ ಠಾಣೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ತೆಂಕನಿಡಿಯೂರು ನಿವಾಸಿ ಪವನ್ ಜಯಕರ ಕೋಟ್ಯಾನ್ ಪತಂಜಲಿ ಆಯುರ್ವೇದಿಕ್ ಡಿಸ್ಟ್ರಿಬ್ಯೂಷನ್ ಗಾಗಿ ಜೂನ್ 20 ರಂದು ವೆಬ್ ಸೈಟ್ ನಲ್ಲಿ ಅರ್ಜಿ ಸಲ್ಲಿಸಿದ್ದಾರೆ.

ಅವರಿಗೆ ಅರ್ಜಿ ಸ್ವೀಕರಿಸಲಾಗಿದೆ ಎಂದು ನಕಲಿ ವೆಬ್ ಸೈಟ್ ನಿಂದ ಮಾಹಿತಿ ಬಂದಿದೆ. ಅಲ್ಲದೇ, ಮೊಬೈಲ್ ಗೆ ಮೆಸೇಜ್ ಕೂಡ ಬಂದಿದ್ದು, ಕರೆ ಮಾಡಿದ ವ್ಯಕ್ತಿ 15,500 ರೂ. ಹಣ ಪಾವತಿಸಿ ನೋಂದಣಿ ಮಾಡಿಸಿಕೊಳ್ಳಲು ತಿಳಿಸಿದ್ದಾನೆ.

ಇದನ್ನು ನಂಬಿದ ಪವನ್ ಜಯಕರ ಅವರು ಹಣ ಪಾವತಿಸಿದ್ದಾರೆ. ಇದಾದ ಬಳಿಕ ಮತ್ತೆ, ಮತ್ತೆ ಹಣ ಪಾವತಿಸಿದ್ದು, ಹೀಗೆ ಬರೋಬ್ಬರಿ 3.27 ಲಕ್ಷ ರೂ. ಗಳನ್ನು ಕಳೆದುಕೊಂಡಿದ್ದಾರೆ.

ಕೊನೆಗೆ ಪತಂಜಲಿ ಆಯುರ್ವೇದಿಕ್ ಕಂಪನಿ ಅಧಿಕಾರಿಗಳನ್ನು ಸಂಪರ್ಕಿಸಿದಾಗ, ನಕಲಿ ವೆಬ್ ಸೈಟ್ ಮೂಲಕ ಪವನ್ ಜಯಕರ ವಂಚನೆಗೆ ಒಳಗಾಗಿರುವುದು ಗೊತ್ತಾಗಿದೆ. ಅವರು ಪೊಲೀಸರಿಗೆ ದೂರು ನೀಡಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...