alex Certify
ಕನ್ನಡ ದುನಿಯಾ       Mobile App
       

Kannada Duniya

ನಶೆಯಲ್ಲಿ ಉಬರ್ ಬುಕ್ ಮಾಡುವ ಮೊದಲು ಇದು ತಿಳಿದಿರಲಿ

ಮೊಬೈಲ್ ಅಪ್ಲಿಕೇಷನ್ ಮೂಲಕ ಕ್ಯಾಬ್ ಸೇವೆ ನೀಡ್ತಿರುವ ಉಬರ್ ತನ್ನ ಆ್ಯಪ್ ನಲ್ಲಿ ದೊಡ್ಡ ಬದಲಾವಣೆ ತರಲು ಮುಂದಾಗಿದೆ. ಮದ್ಯಪಾನ ಮಾಡಿ ಉಬರ್ ಬುಕ್ ಮಾಡ್ತಿದ್ದರೆ ಇದ್ರ ಮಾಹಿತಿ ಆ್ಯಪ್ ಮೂಲಕ ಮೊದಲೇ ಕಾರು ಚಾಲಕನಿಗೆ ತಿಳಿಯಲಿದೆ. ಇದಕ್ಕಾಗಿ ಉಬರ್ ಕಂಪನಿ ಕೃತಕ ಬುದ್ದಿಮತ್ತೆ ತಂತ್ರಜ್ಞಾನವನ್ನು ಅಳವಡಿಸುತ್ತಿದೆ.

ಉಬರ್ ಈಗಾಗಲೇ ಪೇಟೆಂಟ್ ಗೆ ಅರ್ಜಿ ಸಲ್ಲಿಸಿದೆ. ಈ ಸೌಲಭ್ಯದಿಂದ ಪ್ರಯಾಣಿಕರಿಗೆ ಅನುಕೂಲವಾಗಲಿದೆ. ಕುಡಿದ ವ್ಯಕ್ತಿ ಶೇರ್ ಕ್ಯಾಬ್ ಬುಕ್ ಮಾಡಿದಲ್ಲಿ ಚಾಲಕನಿಗೆ ಮೊದಲೇ ತಿಳಿಯುವುದ್ರಿಂದ ಉಳಿದ ಪ್ರಯಾಣಿಕರಿಗಾಗುವ ತೊಂದರೆಯನ್ನು ತಪ್ಪಿಸಬಹುದಾಗಿದೆ.

ಕೃತಕ ಬುದ್ದಿಮತ್ತೆ ತಂತ್ರಜ್ಞಾನದ ಮೂಲಕ ಉಬರ್ ಆ್ಯಪ್ ಗ್ರಾಹಕರ ಟೈಪಿಂಗ್ ವೇಗ, ಬಟನ್ ಒತ್ತುವ ವಿಧಾನ ಹಾಗೂ ನಡೆದಾಡುವ ವಿಧಾನವನ್ನು ಪತ್ತೆ ಹಚ್ಚಲಿದೆ. ನಂತ್ರ ಗ್ರಾಹಕರ ವ್ಯವಹಾರದ ಬಗ್ಗೆ ಚಾಲಕನಿಗೆ ಮಾಹಿತಿ ನೀಡಲಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...