alex Certify
ಕನ್ನಡ ದುನಿಯಾ       Mobile App
       

Kannada Duniya

4 ನಗರಗಳಲ್ಲಿ ಉಬರ್ ಪಾಸ್ ಆರಂಭಿಸಿದ ಕಂಪನಿ

indiatvpaisa_uber

ಆ್ಯಪ್ ಆಧಾರಿತ ಕ್ಯಾಬ್ ಸೇವೆ ನೀಡುವ ಉಬರ್ ಸೋಮವಾರ ಉಬರ್ ಪಾಸ್ ಸೇವೆ ಶುರು ಮಾಡುವುದಾಗಿ ಘೋಷಣೆ ಮಾಡಿದೆ. ಆರಂಭಿಕವಾಗಿ ಉಬರ್ ಪಾಸ್ ಸೇವೆ ದೆಹಲಿ, ಮುಂಬೈ, ಚೆನ್ನೈ ಹಾಗೂ ಕೊಲ್ಕತ್ತಾದಲ್ಲಿ ಲಭ್ಯವಾಗಲಿದೆ. ಇದು ಪ್ರಯಾಣಿಕರ ಆರಾಮದಾಯಕ ಪ್ರಯಾಣಕ್ಕೆ ನೆರವಾಗಲಿದೆ.

ಪ್ರತಿದಿನ ಪ್ರಯಾಣ ಬೆಳೆಸುವ ಪ್ರಯಾಣಿಕರನ್ನು ಗಮನದಲ್ಲಿಟ್ಟುಕೊಂಡು ಉಬರ್ ಪಾಸ್ ವಿನ್ಯಾಸಗೊಳಿಸಲಾಗಿದೆ. ಪ್ರಯಾಣಿಕರು ಉಬರ್ ಪಾಸ್ ಗೆ ಮೆಚ್ಚುಗೆ ವ್ಯಕ್ತಪಡಿಸಿದಲ್ಲಿ ಮುಂದಿನ ದಿನಗಳಲ್ಲಿ ಬೇರೆ ನಗರಗಳಿಗೂ ಇದನ್ನು ವಿಸ್ತರಿಸುವುದಾಗಿ ಉಬರ್ ಇಂಡಿಯಾ ಪ್ರಧಾನ ವ್ಯವಸ್ಥಾಪಕ ಶೈಲೇಶ್ ತಿಳಿಸಿದ್ದಾರೆ.

ಉಬರ್ ಪಾಸ್ ಹೊಂದಿದವರಿಗೆ ಕೆಲವೊಂದು ವಿಶೇಷ ಸೌಲಭ್ಯ ಸಿಗಲಿದೆ. ಉಬರ್ ಪಾಸ್ ಹೊಂದಿದವರಿಗೆ ಒಳ್ಳೆ ರೇಟಿಂಗ್ ಪಡೆದ ಚಾಲಕರು ಲಭ್ಯರಾಗಲಿದ್ದಾರೆ. ಹಾಗೆ ಪ್ರಯಾಣ ಶುಲ್ಕದಲ್ಲಿ ರಿಯಾಯಿತಿ, ಪ್ರಯಾಣ ರದ್ದು ಪಡಿಸಿದ್ರೆ ವಿಧಿಸುವ ಶುಲ್ಕದಲ್ಲಿ ರಿಯಾಯಿತಿ ಸೇರಿದಂತೆ ಅನೇಕ ಸೌಲಭ್ಯ ಸಿಗಲಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...