alex Certify
ಕನ್ನಡ ದುನಿಯಾ       Mobile App
       

Kannada Duniya

ಈ ಕಂಪನಿ ನೀಡಲಿದೆ 10 ಲಕ್ಷ ಮಂದಿಗೆ ಉದ್ಯೋಗ

uber-1

ಸ್ಯಾನ್ ಫ್ರಾನ್ಸಿಸ್ಕೋದ ಕ್ಯಾಬ್ ಅಗ್ರಿಗ್ರೇಟರ್ ಕಂಪನಿ ಉಬರ್ 10 ಲಕ್ಷ ಜನರಿಗೆ ಉದ್ಯೋಗ ನೀಡಲು ಮುಂದಾಗಿದೆ. ಭಾರತದಲ್ಲಿ ಕಂಪನಿ ಗಾಡಿಯಲ್ಲಿ  ಈವರೆಗೆ 50 ಕೋಟಿಗೂ ಹೆಚ್ಚು ಪ್ರಯಾಣಿಕರು ಪ್ರಯಾಣ ಬೆಳೆಸಿದ್ದಾರೆಂದು ಕಂಪನಿ ಅಧ್ಯಕ್ಷರು ಮಾಹಿತಿ ನೀಡಿದ್ದಾರೆ.

ಕಂಪನಿ 2013ರಲ್ಲಿ ಬೆಂಗಳೂರಿನಲ್ಲಿ ತನ್ನ ಸೇವೆ ಶುರುಮಾಡಿತ್ತು. ಈಗ ಭಾರತದ 29 ನಗರಗಳಲ್ಲಿ ತನ್ನ ಸೇವೆ ನೀಡುತ್ತಿದೆ. ಜೊತೆಗೆ 2020ರ ವೇಳೆಗೆ ಕಂಪನಿ 10 ಲಕ್ಷ ಜನರಿಗೆ ಉದ್ಯೋಗ ನೀಡಲಿದೆ. ನಾಲ್ಕು ವರ್ಷಗಳ ಹಿಂದೆ ಕೇವಲ 3 ಉದ್ಯೋಗಿಗಳನ್ನಿಟ್ಟುಕೊಂಡು ಉಬರ್ ತನ್ನ ಕೆಲಸ ಶುರುಮಾಡಿತ್ತಂತೆ. ಈಗ 1 ಸಾವಿರಕ್ಕೂ ಹೆಚ್ಚು ಮಂದಿ ಕೆಲಸ ಮಾಡ್ತಿದ್ದಾರೆ. ಕಂಪನಿ ಪ್ರಕಾರ 4,50,000ಕ್ಕೂ ಅಧಿಕ ನೋಂದಾಯಿತ ಚಾಲಕರಿದ್ದಾರಂತೆ.

ಉಬರ್ ಕಂಪನಿ ಬೆಂಗಳೂರು ಮತ್ತು ಹೈದ್ರಾಬಾದ್ ನಲ್ಲಿ 100ಕ್ಕೂ ಹೆಚ್ಚು ಇಂಜಿನಿಯರ್ ಗಳನ್ನು ನೇಮಿಸಿಕೊಂಡಿದೆ. 2015ರಲ್ಲಿ ಬೆಂಗಳೂರಿನಲ್ಲಿ ಉಬರ್ ಪೂಲ್ ಸೇವೆಯನ್ನು ಪರಿಚಯಿಸಲಾಯ್ತು. ಈಗ ದೆಹಲಿ, ಹೈದ್ರಾಬಾದ್, ಕೋಲ್ಕತ್ತಾ, ಮುಂಬೈ, ಚೆನ್ನೈ, ಪುಣೆಯಲ್ಲಿ ಸೇವೆ ಲಭ್ಯವಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...