alex Certify
ಕನ್ನಡ ದುನಿಯಾ       Mobile App
       

Kannada Duniya

ಉಂಡ ಮನೆಗೇ ದ್ರೋಹ ಬಗೆದ ಉಬರ್ ಸಿಬ್ಬಂದಿ

ಕ್ಯಾಬ್ ಸರ್ವೀಸ್ ಕಂಪನಿ ಉಬರ್ ತನ್ನ ಸಿಬ್ಬಂದಿ ಮೇಲೆ 30 ಲಕ್ಷ ರೂಪಾಯಿ ವಂಚನೆ ಕೇಸ್ ದಾಖಲಿಸಿದೆ. ಬೆಂಗಳೂರಿನಲ್ಲಿ ಈ ಪ್ರಕರಣ ನಡೆದಿದೆ. 2016ರ ಫೆಬ್ರವರಿಯಿಂದ್ಲು ಅರ್ಶದ್ ಬಾಷಾ ಎಂಬಾತ ಕಂಪನಿಗೆ ವಂಚಿಸುತ್ತಿದ್ದ ಎನ್ನಲಾಗಿದೆ.

ಕಳೆದ ಅಕ್ಟೋಬರ್ ನಲ್ಲಿ ಆಂತರಿಕ ತನಿಖೆಯಿಂದ ಇದು ಬೆಳಕಿಗೆ ಬಂದಿತ್ತು. ತನ್ನ ಸ್ನೇಹಿತ ಸೈಫ್ ಅಲಿ ಖಾನ್ ಎಂಬಾತನ ಖಾತೆಯಲ್ಲಿ ಬಾಷಾ 30 ಲಕ್ಷ ರೂಪಾಯಿ ಜಮಾ ಮಾಡಿರುವುದು ಪತ್ತೆಯಾಗಿದೆ. ಬಾಷಾ ಮತ್ತವನ ಸಹಚರನ ಮೇಲೆ ಉಬರ್ ಕಂಪನಿಯ ಜನರಲ್ ಮ್ಯಾನೇಜರ್ ಕ್ರಿಸ್ಟಿಯನ್ ಫ್ರೀಸ್, ಎಚ್ ಎಸ್ ಆರ್ ಲೇಔಟ್ ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಿಸಿದ್ದಾರೆ.

ಚಾಲಕರನ್ನು ಒದಗಿಸಿದ್ರೆ ಉಬರ್ ಕಂಪನಿ ಅವರಿಗೆ ಇನ್ಸೆಂಟಿವ್ ನೀಡುತ್ತದೆ. ಹಣವನ್ನು ನೇರವಾಗಿ ಅವರ ಖಾತೆಗೆ ಡೆಪಾಸಿಟ್ ಮಾಡಲಾಗುತ್ತದೆ. ಸೈಫ್ ಎಂಬಾತ ಒಬ್ಬ ಚಾಲಕನನ್ನೂ ಒದಗಿಸಿರಲಿಲ್ಲ, ಆದ್ರೂ ಆತನ ಖಾತೆಗೆ 30 ಲಕ್ಷ ರೂಪಾಯಿ ಜಮಾ ಆಗಿತ್ತು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...