alex Certify
ಕನ್ನಡ ದುನಿಯಾ       Mobile App
       

Kannada Duniya

ವಿಶ್ವದ ಪ್ರಭಾವಿ ವ್ಯಕ್ತಿಗಳ ಪಟ್ಟಿಯಲ್ಲಿ ಪ್ರಧಾನಿ ಮೋದಿ

ವಿಶ್ವದ ಅತ್ಯಂತ ಪ್ರಭಾವಶಾಲಿಗಳ ಪಟ್ಟಿಯನ್ನು ಫೋರ್ಬ್ಸ್ ಬಿಡುಗಡೆ ಮಾಡಿದೆ. ಅದರಲ್ಲಿ ಭಾರತದಿಂದ ಪ್ರಧಾನಿ ನರೇಂದ್ರ ಮೋದಿ ಹಾಗೂ ಮುಕೇಶ್ ಅಂಬಾನಿಯವರಿಗೆ ಮಾತ್ರ ಸ್ಥಾನ ಲಭಿಸಿದೆ.

ಅಮೆರಿಕದ ಪ್ರಸಿದ್ಧ ನಿಯತಕಾಲಿಕೆ ಫೋರ್ಬ್ಸ್ ಈ ವರ್ಷವೂ ಜಗತ್ತಿನ ಅತ್ಯಂತ ಪ್ರಭಾವಿಗಳ ಪಟ್ಟಿ ಬಿಡುಗಡೆ ಮಾಡಿದೆ. ಇದರಲ್ಲಿ ಪ್ರಧಾನಿ ಮೋದಿ 9 ನೇ ಸ್ಥಾನ ಪಡೆದರೆ, ಮುಕೇಶ್ ಅಂಬಾನಿ 32 ನೇ ಸ್ಥಾನ ಪಡೆದಿದ್ದಾರೆ.

ಒಟ್ಟು 75 ಮಂದಿ ಪ್ರಭಾವಿಗಳಲ್ಲಿ ಭಾರತದಿಂದ ಕೇವಲ ಇಬ್ಬರಿಗೆ ಮಾತ್ರ ಸ್ಥಾನ ಸಿಕ್ಕಿದೆ. ಈ ಮಧ್ಯೆ ಚೀನಾದ ಅಧ್ಯಕ್ಷ ಕ್ಸಿ ಜಿನ್ ಪಿಂಗ್ ಫೋರ್ಬ್ಸ್ ಪಟ್ಟಿಯಲ್ಲಿ ಮೊದಲ ಸ್ಥಾನ ಗಳಿಸಿದ್ದಾರೆ.

ಈ ಪ್ರಭಾವಿಗಳ ಪಟ್ಟಿ ಮಾಡಲು ಫೋರ್ಬ್ಸ್ 4 ವಿಧಾನ ಅನುಸರಿಸುತ್ತೆ. ಪ್ರಭಾವಿಗಳೆನಿಸಿಕೊಂಡವರು ಬಹಳಷ್ಟು ಜನರ ಮೇಲೆ ಪ್ರಭಾವ ಬೀರಿದ್ದಾರಾ? ಅವರ ಬಳಿ ಇರುವ ಹಣದ ಸಂಪನ್ಮೂಲ, ಅವರು ಬಹಳಷ್ಟು ವಿಭಾಗದಲ್ಲಿ ಪ್ರಭಾವಿಗಳಾ? ಹಾಗೂ ತಮ್ಮ ಪ್ರಭಾವವನ್ನು ಚಟುವಟಿಕೆಯಿಂದ ಬಳಸಿಕೊಳ್ಳುತ್ತಿದ್ದಾರೆಂಬುದನ್ನು ಗಮನಿಸಲಾಗುತ್ತದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...