alex Certify
ಕನ್ನಡ ದುನಿಯಾ       Mobile App
       

Kannada Duniya

ಆಧಾರ್ ಮತ್ತು ಪಾನ್ ಲಿಂಕ್ ಮಾಡಲು ಇಲ್ಲಿದೆ ಟಿಪ್ಸ್

pan

ಆಧಾರ್ ನಂಬರ್ ಜೊತೆಗೆ ಲಿಂಕ್ ಮಾಡದೇ ಇದ್ರೆ ಜುಲೈ 1ರ ನಂತರ ನಿಮ್ಮ ಪಾನ್ ನಂಬರ್ ಗೆ ಬೆಲೆಯೇ ಇರುವುದಿಲ್ಲ. ಯಾಕಂದ್ರೆ ಆಧಾರ್ ಮತ್ತು ಪಾನ್ ನಂಬರ್ ಲಿಂಕ್ ಮಾಡೋದು ಕಡ್ಡಾಯ ಅಂತಾ ಸರ್ಕಾರ ಈಗಾಗ್ಲೇ ಗಡುವು ವಿಧಿಸಿಬಿಟ್ಟಿದೆ.

ಆದಾಯ ತೆರಿಗೆ ಪಾವತಿಸಲು ಕೂಡ ಆಧಾರ್ ಸಂಖ್ಯೆ ಈಗ ಕಡ್ಡಾಯ. ಸರ್ಕಾರ ಕೊಟ್ಟಿರೋ ಗಡುವು ಮುಗಿಯಲು ಇನ್ನೆರಡು ದಿನಗಳು ಮಾತ್ರ ಬಾಕಿ ಇವೆ. ಹಾಗಿದ್ರೆ ಆಧಾರ್ ಸಂಖ್ಯೆಗೆ ಪಾನ್ ನಂಬರ್ ಲಿಂಕ್ ಮಾಡೋದು ಹೇಗೆ ಅನ್ನೋದನ್ನು ನೋಡೋಣ.

ಆನ್ ಲೈನ್ ಲಿಂಕಿಂಗ್…

ಇದಕ್ಕಾಗಿ ನೀವು ರಿಜಿಸ್ಟರ್ ಅಥವಾ ಲಾಗಿನ್ ಮಾಡಬೇಕಿಲ್ಲ. incometaxindiaefiling.gov.in ವೆಬ್ ಸೈಟ್ ನಲ್ಲಿ ಯಾರು ಬೇಕಾದ್ರೂ ಆಧಾರ್ ಮತ್ತು ಪಾನ್ ಸಂಖ್ಯೆಗಳನ್ನು ಲಿಂಕ್ ಮಾಡಬಹುದು.

ಐಟಿ ಇಲಾಖೆಯ ಇ ಫೈಲಿಂಗ್ ವೆಬ್ ಸೈಟ್ ಓಪನ್ ಮಾಡಿದ ಬಳಿಕ ಎಡಭಾಗದಲ್ಲಿ ಕೆಂಪು ಅಕ್ಷರಗಳಲ್ಲಿರುವ ಲಿಂಕ್ ಆಧಾರ್ ಎಂಬುದನ್ನು ಕ್ಲಿಕ್ ಮಾಡಿ.

ಅಲ್ಲಿ ನಿಮ್ಮ ಹೆಸರು, ಆಧಾರ್ ಸಂಖ್ಯೆ, ಪಾನ್ ನಂಬರ್ ಅನ್ನು ಯಾವುದೇ ತಪ್ಪಿಲ್ಲದಂತೆ ನಮೂದಿಸಿ. ನಂತರ ಸಬ್ ಮಿಟ್ ಎಂಬ ಆಯ್ಕೆಯನ್ನು ಕ್ಲಿಕ್ ಮಾಡಿ. ಯುಐಡಿಎಐನಿಂದ ವೆರಿಫಿಕೇಶನ್ ಬಂದ ಬಳಿಕ ನಿಮ್ಮ ಲಿಂಕಿಂಗ್ ಯಶಸ್ವಿಯಾಗುತ್ತದೆ.

ಜನ್ಮದಿನಾಂಕ ಮತ್ತು ಲಿಂಗ, ಆಧಾರ್ ಮತ್ತು ಪಾನ್ ಕಾರ್ಡ್ ನಲ್ಲಿ ಒಂದೇ ತೆರನಾಗಿರಬೇಕು. ಇಲ್ಲವಾದಲ್ಲಿ ಲಿಂಕಿಂಗ್ ಅಸಾಧ್ಯ.

ಎಸ್ ಎಂ ಎಸ್ ಮೂಲಕವೂ ನೀವು ಆಧಾರ್ ಮತ್ತು ಪಾನ್ ನಂಬರ್ ಅನ್ನು ಲಿಂಕ್ ಮಾಡಬಹುದು. ಇದಕ್ಕಾಗಿ 567678 ಅಥವಾ 56161ಗೆ ಮೆಸೇಜ್ ಕಳಿಸಿ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...