alex Certify
ಕನ್ನಡ ದುನಿಯಾ       Mobile App
       

Kannada Duniya

ದೊಡ್ಡ ಬದಲಾವಣೆ ಮಾಡಿದ ಟ್ವೀಟರ್

twtr_new_main_1497616160_749x421

ಮೈಕ್ರೋ ಬ್ಲಾಗಿಂಗ್ ವೆಬ್ಸೈಟ್ ಟ್ವೀಟರ್ ದೊಡ್ಡ ಬದಲಾವಣೆ ಮಾಡಿದೆ. ಟ್ವೀಟರ್ ವೆಬ್ ಬಳಸ್ತಾ ಇದ್ದರೆ ನೀವು ಹೊರ ಟ್ವೀಟರ್ ವೆಬ್ ನೋಡಬಹುದು. ವಿಶೇಷವಾಗಿ ಐಫೋನ್ ನಲ್ಲಿ ಸಾಕಷ್ಟು ಬದಲಾವಣೆಗಳನ್ನು ಮಾಡಲಾಗಿದೆ. ಆ್ಯಪ್ ನಲ್ಲಿ ಸಣ್ಣ ಬದಲಾವಣೆ ಮಾಡಲಾಗಿದೆ. ಉದಾಹರಣೆಗೆ ರೀಟ್ವಿಟ್ ಐಕಾನ್ ಇನ್ನಷ್ಟು ಶಾರ್ಪ್ ಆಗಿದೆ.

ನೇವಿಗೇಷನ್ ಮೊದಲಿಗಿಂತ ಸುಲಭವಾಗಿದೆ. ಚೌಕವಾಗಿದ್ದ ಪ್ರೊಫೈಲ್ ಈಗ ಗುಂಡಗಾಗಿದೆ. iOS ಆಪ್ ಗೆ ಹೊಸ ಟ್ಯಾಪ್ ಸೇರಿಸಲಾಗಿದೆ. ಇದನ್ನು ಸ್ವೈಪ್ ಮಾಡಿ ಪ್ರೊಫೈಲ್ ಫೋಟೋ ನೋಡಬಹುದು. ಆಂಡ್ರಾಯ್ಡ್ ಸ್ಮಾರ್ಟ್ಫೋನ್ ನಲ್ಲಿ ಹಿಂದಿನ ವರ್ಷವೇ ಪ್ರೊಫೈಲ್ ಲೇಔಟ್ ಬದಲಾಯಿಸಲಾಗಿತ್ತು. ಇದಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದರಿಂದ ಕಂಪನಿ ಐಒಸಿಯಲ್ಲೂ ಈ ಬದಲಾವಣೆ ಮಾಡಲು ಮುಂದಾಗಿದೆ.

ರೀಟ್ವಿಟ್ ನಲ್ಲಿ ಲೈವ್ ಅಪ್ಡೇಟ್ ಸಿಗಲಿದೆ. ಟ್ವೀಟರ್ ನಲ್ಲಾಗಿರುವ ಈ ಬದಲಾವಣೆ ಬಗ್ಗೆ ಸಾಕಷ್ಟು ವಿರೋಧಗಳು ವ್ಯಕ್ತವಾಗ್ತಾ ಇದೆ. ಫೇಸ್ಬುಕ್ ನಂತೆ ಟ್ವೀಟರ್ ನಲ್ಲಿ ಟ್ವಿಟ್ ತಿದ್ದುಪಡಿ ಮಾಡುವ ಅವಕಾಶ ನೀಡಬೇಕೆಂದು ಅನೇಕ ದಿನಗಳಿಂದಲೇ ಬಳಕೆದಾರರು ಬೇಡಿಕೆ ಇಟ್ಟಿದ್ದರು. ಆದ್ರೆ ಕಂಪನಿ ಈ ಬದಲಾವಣೆ ಮಾಡಿಲ್ಲ. ಇದು ಬಳಕೆದಾರರ ಕೋಪಕ್ಕೆ ಕಾರಣವಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...