alex Certify
ಕನ್ನಡ ದುನಿಯಾ       Mobile App
       

Kannada Duniya

ಆ. 23 ರಂದು ಬಿಡುಗಡೆಯಾಗಲಿದೆ ಟಿವಿಎಸ್ ಹೈಬ್ರಿಡ್ ಸ್ಕೂಟರ್

ಟಿವಿಎಸ್ ಮೋಟರ್ ಕಂಪನಿ ಹೈಬ್ರಿಡ್ ಸ್ಕೂಟರ್ ಬಿಡುಗಡೆ ಮಾಡಲಿದೆ. ಆಗಸ್ಟ್ 23ರಂದು ಹೊಸ ಸ್ಕೂಟರ್ ಮಾರುಕಟ್ಟೆಗೆ ಬರಲಿದೆ. ಟಿವಿಎಸ್ ಈ ಹೈಬ್ರಿಡ್ ಸ್ಕೂಟರ್ ಗೆ TVS iQube Hybrid ಎಂದು ಹೆಸರಿಟ್ಟಿದೆ.

ಈ ಹೈಬ್ರಿಡ್ ಸ್ಕೂಟರನ್ನು ಮೊದಲ ಬಾರಿ 2014ರ ಆಟೋ ಎಕ್ಸ್ಪೋದಲ್ಲಿ ಪ್ರದರ್ಶನಕ್ಕಿಡಲಾಗಿತ್ತು. ಇದ್ರಲ್ಲಿ ಐಸಿಐ ಹಾಗೂ ಎಲೆಕ್ಟ್ರಿಕ್ ಮೋಟರ್ ಮಿಶ್ರಣವನ್ನು ನೋಡಬಹುದಾಗಿದೆ. ಹೊಸ ಟ್ರೇಡ್ ಮಾರ್ಕ್ ಲೋಗೋದೊಂದಿಗೆ ಟಿವಿಎಸ್ ಐಕ್ಯೂ ಹೈಬ್ರಿಡ್ ಸ್ಕೂಟರ್ ಹೆಸರು ನೋಂದಣಿಯಾಗಿದೆ ಎನ್ನಲಾಗ್ತಿದೆ.

ಟಿವಿಎಸ್ ಮೋಟರ್ ಕಂಪನಿ ಈ ವರ್ಷ ಹೊಸ ಉತ್ಪನ್ನಗಳನ್ನು ಬಿಡುಗಡೆ ಮಾಡ್ತಿದೆ. RTR 160 4V, Ntorq125 ಸ್ಕೂಟರ್ ಹಾಗೂ Apache RR310 ಬೈಕ್ ಬಿಡುಗಡೆ ಮಾಡ್ತಿದೆ. ಟಿವಿಎಸ್ ತನ್ನ ಮೊದಲ ಹೈಬ್ರಿಡ್ ಪರಿಕಲ್ಪನೆಯನ್ನು 2010ರಲ್ಲಿ ಪರಿಚಯಿಸಿತ್ತು. ಸ್ಕೂಟರ್ ಲೀಟರ್ ಪೆಟ್ರೋಲ್ ಗೆ 70 ಕಿಲೋಮೀಟರ್ ಗಿಂತಲೂ ಹೆಚ್ಚು ಮೈಲೇಜ್ ನೀಡಲಿದೆ ಎನ್ನಲಾಗ್ತಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...