alex Certify
ಕನ್ನಡ ದುನಿಯಾ       Mobile App
       

Kannada Duniya

ಟಿವಿಎಫ್ ಸಿಇಓ ವಿರುದ್ಧ ದಾಖಲಾಯ್ತು ಎಫ್ಐಆರ್

tvf

ಮಹಿಳೆಗೆ ಲೈಂಗಿಕ ಕಿರುಕುಳ ನೀಡಿದ ಆರೋಪಕ್ಕೆ ಸಂಬಂಧಪಟ್ಟಂತೆ ‘ದಿ ವೈರಲ್ ಫೀವರ್’ ಕಂಪನಿಯ ಸಿಇಓ ಅರ್ನಬ್ ಕುಮಾರ್ ವಿರುದ್ಧ ಕೊನೆಗೂ ಎಫ್ ಐ ಆರ್ ದಾಖಲಾಗಿದೆ. ಅರ್ನಬ್ ಕುಮಾರ್  ಜೊತೆಗಿನ ಸಂಭಾಷಣೆ ವೇಳೆ ತಮಗಾದ ಕೆಟ್ಟ ಅನುಭವ, ಆತನಿಂದ ತಾನು ಅನುಭವಿಸಿದ ದೈಹಿಕ ಹಾಗೂ ಮಾನಸಿಕ ಕಿರುಕುಳದ ಬಗ್ಗೆ ಮಹಿಳೆಯೊಬ್ಳು ಸಾಮಾಜಿಕ ಜಾಲತಾಣಗಳಲ್ಲಿ ಬರೆದುಕೊಂಡಿದ್ಲು.

ನಂತರ ಹಲವು ಮಹಿಳೆಯರು ತಮಗೂ ಕೂಡ ಅರ್ನಬ್ ಕುಮಾರ್ ಇದೇ ರೀತಿ ಕಿರುಕುಳ ನೀಡಿರೋದಾಗಿ ಆರೋಪಿಸಿದ್ರು. ಮುಂಬೈನ ಅಂಧೇರಿ ಈಸ್ಟ್ ನಲ್ಲಿರೋ ಎಂಐಡಿಸಿ ಪೊಲೀಸ್ ಠಾಣೆಯಲ್ಲಿ ಅರ್ನಬ್ ವಿರುದ್ಧ ಕೇಸ್ ದಾಖಲಾಗಿದೆ. ಆದ್ರೆ ನೊಂದ ಮಹಿಳೆಯಿಂದ ಅಧಿಕೃತವಾಗಿ ದೂರು ಬಂದಿಲ್ಲ ಅಂತಾ ಪೊಲೀಸರು ಹೇಳಿಕೊಳ್ತಿದ್ದಾರೆ.

ದೂರು ನೀಡಿದ ಮಹಿಳೆಯ ಹೆಸರನ್ನು ಕೂಡ ಬಹಿರಂಗಪಡಿಸಿಲ್ಲ. ಪ್ರಕರಣ ಮುಚ್ಚಿಹಾಕಲು ತುದಿಗಾಲಲ್ಲಿದ್ದಾರೆ ಅನ್ನೋ ಆರೋಪ ಕೂಡ ಕೇಳಿಬಂದಿದೆ. ಆದ್ರೆ ಇದುವರೆಗೂ ಅರ್ನಬ್ ಕುಮಾರ್ ಬಂಧನವಾಗಿಲ್ಲ. ಲೈಂಗಿಕ ದೌರ್ಜನ್ಯ ಆರೋಪಗಳನ್ನು ನಿರಾಕರಿಸಿರುವ ಅರ್ನಬ್, ತಮ್ಮ ವಿರುದ್ಧ ಷಡ್ಯಂತ್ರ ರೂಪಿಸಲಾಗಿದೆ ಅಂತಾ ಹೇಳಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...