alex Certify
ಕನ್ನಡ ದುನಿಯಾ       Mobile App
       

Kannada Duniya

‘ಕ್ಯಾಶ್’ ಇಲ್ಲದಿದ್ರೂ ಡೋಂಟ್ ವರಿ, ಸ್ಮಾರ್ಟ್ ಫೋನ್ ಇದ್ದರೆ ಸರಿ

mobile-bank

ನಿಮ್ಮ ಬಳಿ ನಗದು ಇಲ್ವಾ? ಬೇರೆ ಬೇರೆ ಬಿಲ್ ಗಳು ಹಾಗೂ ಅಂಗಡಿಯಲ್ಲಿ ಹಣ ಪಾವತಿಸುವುದು ಹೇಗೆ ಅನ್ನೋ ಚಿಂತೆಯಲ್ಲಿದ್ದೀರಾ? ಡೋಂಟ್ ವರಿ, ಅದಕ್ಕೆ ಸುಲಭ ಪರಿಹಾರವಿದೆ. ಇತ್ತೀಚಿನ ದಿನಗಳಲ್ಲಿ ಬಹುತೇಕ ಎಲ್ಲರ ಬಳಿಯೂ ಸ್ಮಾರ್ಟ್ ಫೋನ್ ಇದೆ. ಅದನ್ನೇ ನೀವು ವಾಲೆಟ್ ಅನ್ನಾಗಿ ಪರಿವರ್ತಿಸಿಕೊಳ್ಳಬಹುದು.

ಪೇಮೆಂಟ್, ಆನ್ ಲೈನ್ ಖರೀದಿ, ಬ್ಯಾಂಕ್ ವಹಿವಾಟು ಎಲ್ಲವನ್ನೂ ಸ್ಮಾರ್ಟ್ ಫೋನ್ ಮೂಲಕ ಮಾಡಬಹುದು. ಗೋ ಕ್ಯಾಶ್ ಲೆಸ್ ಅನ್ನೋದು ಸದ್ಯದ ಮಂತ್ರ, ಜೇಬಿನಲ್ಲಿ ಹೆಚ್ಚು ಕ್ಯಾಶ್ ಇಟ್ಕೊಂಡು ಓಡಾಡೋದಕ್ಕಿಂತ ಇದು ಸುರಕ್ಷಿತವೂ ಹೌದು. ಸಂಪೂರ್ಣ ನೀವು ಕ್ಯಾಶ್ ಲೆಸ್ ಆಗೋದು ಹೇಗೆ ಅನ್ನೋದು ಇಲ್ಲಿದೆ.

ಬಹುತೇಕ ಶಾಪಿಂಗ್ ಅಪ್ಲಿಕೇಶನ್ ಗಳಲ್ಲಿ ಮೊಬೈಲ್ ವಾಲೆಟ್ ಅಳವಡಿಸಲಾಗಿರುತ್ತದೆ. ಹಾಗಾಗಿ ನೀವು ನಗದು ಖರ್ಚು ಮಾಡೋ ಬದಲು ಆನ್ ಲೈನ್ ನಲ್ಲಿ ಖರೀದಿ ಮಾಡಬಹುದು.

ಮೊಬೈಲ್ ರೀಚಾರ್ಜ್ ಮಾಡಲು ಫ್ರೀಚಾರ್ಜ್ ಡೌನ್ ಲೋಡ್ ಮಾಡಿಕೊಳ್ಳಿ. ಡಿಟಿಎಚ್ ಪೇಮೆಂಟ್ ಅಥವಾ ವಿದ್ಯುತ್ ಬಿಲ್ ಗಳನ್ನು ಕೂಡ ಪಾವತಿಸಿ.

ಇನ್ನೂ ಹಲವಾರು ಜನಪ್ರಿಯ ಅಪ್ಲಿಕೇಷನ್ ಗಳಿವೆ. ನಿಮ್ಮ ಕ್ಯಾಶ್ ಲೆಸ್ ವಹಿವಾಟಿಗೆ ಅದು ಅನುಕೂಲ ಮಾಡಿಕೊಡುತ್ತದೆ. ಇದರಿಂದ ಲಿಕ್ವಿಡ್ ಕ್ಯಾಶ್ ಸಿಗದ ಸಂದರ್ಭದಲ್ಲಿ ಕೂಡ ನೀವು ಮ್ಯಾನೇಜ್ ಮಾಡಬಹುದು.

 

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...