alex Certify
ಕನ್ನಡ ದುನಿಯಾ       Mobile App
       

Kannada Duniya

ಅಬ್ಬಬ್ಬಾ! ‘ಟ್ರಂಪ್ ಟವರ್’ ನಿವಾಸದ ಬೆಲೆ ಕೇಳಿದ್ರೆ ಬೆರಗಾಗ್ತೀರ

ಗುರ್ಗಾಂವ್ ನಲ್ಲಿ ಟ್ರಂಪ್ ಟವರ್ ಪ್ರಾಜೆಕ್ಟ್ ಲಾಂಚ್ ಆದ ಮೊದಲ ದಿನವೇ 150 ಕೋಟಿ ಮೌಲ್ಯದ 20 ಅಪಾರ್ಟ್ಮೆಂಟ್ ಗಳು ಮಾರಾಟವಾಗಿವೆ. ಈ ಪ್ರಾಜೆಕ್ಟ್ ಅಡಿಯಲ್ಲಿ ಒಟ್ಟು 2500 ಕೋಟಿ ಮೌಲ್ಯದ 250 ಅಪಾರ್ಟ್ಮೆಂಟ್ ಗಳನ್ನು ಸೇಲ್ ಮಾಡಲು M3M India ಸಂಸ್ಥೆ ಯೋಜನೆ ಹಾಕಿಕೊಂಡಿದೆ.

ಜಾಗತಿಕ ರಿಯಲ್ಟಿ ಬ್ರಾಂಡ್ ಟ್ರಂಪ್ ಟವರ್ಸ್, M3M India ಮತ್ತು ಟ್ರಿಬೆಕಾ ಡೆವಲಪರ್ಸ್ ಮೂಲಕ ಉತ್ತರ ಭಾರತಕ್ಕೆ ಕಾಲಿಟ್ಟಿದೆ. ‘ಟ್ರಂಪ್ ಟವರ್ಸ್ ದೆಹಲಿ ಎನ್ ಸಿ ಆರ್’ ಪ್ರಾಜೆಕ್ಟ್ ನ ಜವಾಬ್ಧಾರಿ M3M India ಸಂಸ್ಥೆಯ ಮೇಲಿದೆ. ಇದಕ್ಕೆ 1200 ಕೋಟಿ ರೂಪಾಯಿ ವೆಚ್ಚ ಮಾಡಲಾಗಿದೆ.

ಮೊದಲ ದಿನವೇ ದಾಖಲೆಯ 20 ಐಷಾರಾಮಿ ಮನೆಗಳು ಮಾರಾಟವಾಗಿರೋದು ಸಂಸ್ಥೆಗೆ ಖುಷಿ ಕೊಟ್ಟಿದೆ. ಟ್ರಂಪ್ ಆರ್ಗನೈಸೇಶನ್ ಲೈಸನ್ಸ್ ಅಡಿಯಲ್ಲಿ ಮನೆಗಳನ್ನು ನಿರ್ಮಿಸಲಾಗ್ತಿದೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ರ ಪುತ್ರ ಈ ಕಂಪನಿಗೆ ಮಾಲೀಕ.

Subscribe Newsletter

Get latest updates on your inbox...

Opinion Poll

  • ಗುಜರಾತ್ ಫಲಿತಾಂಶ ಕರ್ನಾಟಕ ವಿಧಾನಸಭಾ ಚುನಾವಣೆ ಮೇಲೆ ಪರಿಣಾಮ ಬೀರಲಿದೆಯೇ...?

    View Results

    Loading ... Loading ...