alex Certify
ಕನ್ನಡ ದುನಿಯಾ       Mobile App
       

Kannada Duniya

ದ್ವಿಚಕ್ರ ವಾಹನ ಪ್ರಿಯರ ಕುತೂಹಲಕ್ಕೆ ಕಾರಣವಾಗಿದೆ ಈ ಬೈಕ್

ಟ್ರಿಯಂಪ್ ಇಂಡಿಯಾ ಈ ವರ್ಷ ಮೂರು ಹೊಚ್ಚ ಹೊಸ ಮೋಟಾರ್ ಬೈಕ್ ಗಳನ್ನು ಬಿಡುಗಡೆ ಮಾಡ್ತಿದೆ. ಹೌದು….ಅಮೆರಿಕಾ ಮೂಲದ ಟ್ರಿಯಂಪ್ ಕಂಪನಿ ಟೈಗರ್ 800 ಹಾಗೂ ಟೈಗರ್ 1200 ಎಂಬ ಎರಡು ಮೋಟಾರ್ ಬೈಕ್ ಗಳನ್ನು ಇದೇ ವರ್ಷ ಬಿಡುಗಡೆ ಮಾಡುವುದಾಗಿ ಘೋಷಿಸಿತ್ತು. ಇದರ ಜೊತೆಗೆ ಸ್ಪೀಡ್ ಮಾಸ್ಟರ್ ಅನ್ನೋ ಹೊಸ ಮಾಡೆಲ್ ಬೈಕ್ ಸಹ ಬಿಡುಗಡೆ ಮಾಡುವುದಾಗಿ ಪ್ರಕಟಿಸಿದೆ.

ಈ ಕುರಿತು ಮಾತನಾಡಿರುವ ಕಂಪನಿ ಎಂಡಿ ವಿಮಲ್ ಸಂಬ್ಲಿ, ಇನ್ನು ಕೆಲವೇ ತಿಂಗಳುಗಳಲ್ಲಿ ಸ್ಪೀಡ್ ಮಾಸ್ಟರ್ ಮಾರುಕಟ್ಟೆಗೆ ಬಿಡುವುದಾಗಿ ಘೋಷಿಸಿದ್ದಾರೆ.

ಅಂದ ಹಾಗೆ ಸ್ಪೀಡ್ಮಾಸ್ಟರ್ ಸಾಕಷ್ಟು ಅಪ್ಡೇಟೆಡ್ ಡಿಸೈನ್ ಗಳನ್ನು ಹೊಂದಿದೆ. 1200 ಸಿಸಿ ಇಂಜಿನ್ ಬೈಕ್ ಆಗಿರುವ ಸ್ಪೀಡ್ ಮಾಸ್ಟರ್ ನಲ್ಲಿ ನೀವು ಆರಾಮಾಗಿ ಕುಳಿತುಕೊಳ್ಳುವಂತೆ ಡಿಸೈನ್ ಮಾಡಲಾಗಿದೆ. ಎಲ್ಇಡಿ ಹೆಡ್ಲ್ಯಾಂಪ್ ಹಾಗೂ ಡಿಜಿಟಲ್ ಸ್ಪೀಡೋ ಮೀಟರ್ ಈ ಬೈಕ್ ನ ಇನ್ನೊಂದು ವಿಶಿಷ್ಟತೆ.

ಟೈಯರ್ ಕೂಡ ವಿಶೇಷವಾಗಿ ತಯಾರಾಗಿದ್ದು, ಎರಡೂ ಚಕ್ರಗಳೂ 16 ಇಂಚು ಇರಲಿದೆ. ಹೀಗಾಗಿ ಸ್ಪೀಡ್ ಮಾಸ್ಟರ್, ಬೈಕ್ ಪ್ರಿಯರಲ್ಲಿ ಸಾಕಷ್ಟು ಆಸಕ್ತಿ ಹುಟ್ಟುಹಾಕಿದೆ.

ಇನ್ನು ಟೈಗರ್ 800 ಬೈಕ್ ಕೂಡಾ ಇನ್ನಷ್ಟು ಹೊಸ ಫೀಚರ್ಸ್ ಒಳಗೊಂಡಿದೆ. ಎಲ್ ಇ ಡಿ ಹೆಡ್ಲ್ಯಾಂಪ್, ಹೈ ಎಂಡ್ ಸಸ್ಪೆನ್ಶನ್ ಜೊತೆಗೆ ಕಂಫರ್ಟಬಲ್ ಸೀಟ್ ಡಿಸೈನ್ ಮಾಡಲಾಗಿದೆ. ಟೈಗರ್ 1200 ಹೊಸ ಹೊಸ ಕಲರ್ ಆಪ್ಶನ್ ಗಳನ್ನೊಳಗೊಂಡು ಮಾರುಕಟ್ಟೆಗೆ ಬರಲಿದೆ. ಜೊತೆಗೆ 10 ಕೆಜಿ ತೂಕ ಕಡಿಮೆಯಾಗಿದ್ದು, ಕೀ ಇಲ್ಲದೆಯೇ ಸ್ಟಾರ್ಟ್ ಮಾಡಬಹುದಾದ ಆಪ್ಶನ್ ಕೂಡ ಇದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...