alex Certify
ಕನ್ನಡ ದುನಿಯಾ       Mobile App
       

Kannada Duniya

ಭಾರತದ ರಸ್ತೆಗಿಳಿಯಲಿದೆ 1200 ಸಿಸಿಯ ಈ ಬೈಕ್

ಬ್ರಿಟನ್ ಮೋಟರು ಸೈಕಲ್ ಕಂಪನಿ Triumph, ಕ್ಲಾಸಿಕ್ ಕ್ರೂಸರ್ ರೇಂಜ್ ನ ಹೊಸ ಮೋಟರ್ ಸೈಕಲನ್ನು ಭಾರತದಲ್ಲಿ ಪರಿಚಯಿಸಲಿದೆ. ಬೊನ್ವಿಲ್ ಸ್ಪೀಡ್ಮಾಸ್ಟರ್ ಹೆಸರಿನ ಈ ಬೈಕ್ ಫೆಬ್ರವರಿ 27ರಂದು ಭಾರತದಲ್ಲಿ ಬಿಡುಗಡೆಯಾಗಲಿದೆ.

ಈ ಹೊಸ ಬೈಕ್ 10 ಲಕ್ಷ ( ಎಕ್ಸ್ ಶೋ ರೂಂ) ವೆಚ್ಚದಲ್ಲಿ ಗ್ರಾಹಕರ ಕೈಗೆ ಸಿಗಲಿದೆ ಎಂದು ಅಂದಾಜಿಸಲಾಗಿದೆ. ಬೊನ್ವಿಲ್ ಸ್ಪೀಡ್ಮಾಸ್ಟರ್ ನಲ್ಲೂ Triumph ಬೊಬರ್, ಬೊನ್ವಿಲ್ T120 ರೀತಿಯಲ್ಲಿಯೇ 1200ಸಿಸಿ ಡಿಪ್ಲೇಸ್ಮೆಂಟ್ ನೀಡಲಾಗಿದೆ. ಪ್ಯಾರಲಲ್ ಟ್ವಿನ್ ಮತ್ತು ಲಿಕ್ವಿಡ್ ಕೋಲ್ಡ್ ಇಂಜಿನ್ ನೀಡಲಾಗಿದೆ.

ಇದು 76bhp ಹೆಚ್ಚುವರಿ ಪವರ್ ಹಾಗೂ 106 Nm ಪೀಕ್ ಟಾರ್ಕ್ ಜೊತೆ ಸಿಗಲಿದೆ. ಇದ್ರಲ್ಲಿ 6-ಸ್ಪೀಡ್ ಗೇರ್ ಬಾಕ್ಸ್ ನೀಡಲಾಗಿದೆ. LCD ಮಲ್ಟಿ-ಫಂಕ್ಷನಲ್ ಇನ್ಸ್ಟ್ರುಮೆಂಟ್ ಪ್ಯಾಕ್, ಅನಲಾಗ್ ಸ್ಪೀಡೋಮೀಟರ್, ಓಡೋಮೀಟರ್, ಇಂಧನ ಗೇಜ್, ಸರ್ವೀಸ್ ಇಂಡಿಕೇಟರ್, ಕ್ಲಾಕ್ ಹಾಗೂ ಎರಡು ರೈಡಿಂಗ್ ಮೋಡ್ ಜೊತೆ ಈ ಬೈಕ್ ಮಾರುಕಟ್ಟೆಗೆ ಬರಲಿದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...