alex Certify
ಕನ್ನಡ ದುನಿಯಾ       Mobile App
       

Kannada Duniya

ಟ್ರಕ್ –ಬಸ್ ಟೈರ್ ನಿಂದ ಸಿದ್ಧವಾಗಿದೆ ಸುಂದರ ಚಪ್ಪಲಿ

rcb-12

ಟ್ರಕ್, ಬಸ್ ಹಾಗೂ ಕಾರುಗಳ ಹಳೆಯ ಟೈರ್ ಎಲ್ಲಿ ಎಸೆಯೋದು ಎನ್ನುವ ಬಗ್ಗೆ ಚಿಂತೆ ಮಾಡಬೇಕಾಗಿಲ್ಲ. ಈ ಟೈರ್ ಗಳು ಈಗ ಕಸವಲ್ಲ. ಈ ತ್ಯಾಜ್ಯ ಮತ್ತೊಂದು ವಸ್ತು ಸಿದ್ಧಪಡಿಸುವ ಕಚ್ಚಾವಸ್ತುವಾಗಿದೆ. ಮುಂಬೈನ ಎಂಬಿಎ ದಂಪತಿಯೊಂದು ಹಳೆ ಟೈರ್ ನಿಂದ ಹೊಸ ವಸ್ತು ಸಿದ್ಧಪಡಿಸಿದೆ.

ಜೆ.ರೇಂಜ್ ಹಾಗೂ ಜೋತ್ಸಾನಾ ಹಳೆ ಟೈರ್ ನಿಂದ ಸುಂದರ ಶೂ ಸಿದ್ಧಪಡಿಸ್ತಾ ಇದೆ. Paaduks ಡಾಟ್ ಕಾಂ ಹೆಸರಿನ ಆನ್ಲೈನ್ ಶೂ ಶೋರೂಂನಲ್ಲಿ ಶೂಗಳನ್ನು ಮಾರಾಟಮಾಡ್ತಿದ್ದಾರೆ. ಹಳೆ ಟೈರ್ ನಿಂದ ಈ ಶೂಗಳನ್ನು ಸಿದ್ಧಪಡಿಸಲಾಗಿದೆ. ಜೆ.ರೇಂಜ್ ಮೊದಲು ಕನ್ಸಲ್ಟೆನ್ಸಿ ನಡೆಸುತ್ತಿದ್ದರು. ಮದುವೆಯಾದ್ಮೇಲೆ ಆನ್ಲೈನ್ ಶೋರೂಂ ಶುರುಮಾಡಿದ್ದಾರೆ. ಇದ್ರಲ್ಲಿ ಟೈರ್ ನಿಂದ ತಯಾರಿಸಿದ ಶೂ, ವಿವಿಧ ಬಗೆಯ ಚಪ್ಪಲಿಗಳನ್ನು ಮಾರಾಟ ಮಾಡಲಾಗ್ತಾ ಇದೆ. ಟೈರ್ ನಿಂದ ತಯಾರಿಸಿದ ಈ ಶೂಗಳಿಗೆ ಸಾಕಷ್ಟು ಬೇಡಿಕೆ ಇದೆ. ಆನ್ಲೈನ್ ನಲ್ಲೊಂದೇ ಅಲ್ಲದೆ ಕೆಲ ಅಂಗಡಿಗಳಲ್ಲೂ ಇದನ್ನು ಮಾರಾಟ ಮಾಡಲಾಗ್ತಾ ಇದೆ.

2013ರಲ್ಲಿ ಈ ಶೋರೂಂ ಶುರುಮಾಡಿದ್ದಾರೆ ದಂಪತಿ. ಇಂಡೋನೇಷ್ಯಾದ ವ್ಯಕ್ತಿಯೊಬ್ಬರು ಟೈರ್ ನಿಂದ ಶೂ ತಯಾರಿಸಿ ಯುನೈಟೆಡ್ ಸ್ಟೇಟ್ಸ್ ಗೆ ಮಾರಾಟ ಮಾಡುತ್ತಿರುವ ಸುದ್ದಿ ಓದಿದ್ದರಂತೆ. ಇದೇ ಐಡಿಯಾವನ್ನು ಭಾರತದಲ್ಲಿ ಜಾರಿಗೆ ತಂದು ಯಶಸ್ವಿಯಾಗಿದ್ದಾರೆ. 300ರಿಂದ 1100 ರೂಪಾಯಿವರೆಗಿನ ಚಪ್ಪಲಿ ಇಲ್ಲಿ ಸಿಗ್ತಾ ಇದೆ.

 

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...