alex Certify
ಕನ್ನಡ ದುನಿಯಾ       Mobile App
       

Kannada Duniya

ರಾಜ್ಯಕ್ಕೆ ಬಂಪರ್ ಕೊಡುಗೆ: ಶಿವಮೊಗ್ಗ – ತಿರುಪತಿ ಸೇರಿ 3 ಹೊಸ ರೈಲು ಸಂಚಾರ

ಮಲೆನಾಡಿಗೆ ರೈಲ್ವೆ ಇಲಾಖೆ ಬಂಪರ್ ಕೊಡುಗೆ ನೀಡಿದ್ದು, ಮೂರು ಹೊಸ ರೈಲು ಸಂಚಾರ ಆರಂಭವಾಗಲಿದೆ. ಶಿವಮೊಗ್ಗದಿಂದ ತಿರುಪತಿ, ಶಿವಮೊಗ್ಗದಿಂದ ಚೆನ್ನೈ ಮತ್ತು ಶಿವಮೊಗ್ಗ – ಮೈಸೂರು ನಡುವೆ 3 ಹೊಸ ರೈಲುಗಳ ಸಂಚಾರ ಆರಂಭವಾಗಲಿದೆ. ಈ ಮೂರು ರೈಲುಗಳು ವಾರಕ್ಕೊಮ್ಮೆ ಸಂಚರಿಸಲಿವೆ.

ಶಿವಮೊಗ್ಗ ಟೌನ್ – ತಿರುಪತಿ (ರೇಣಿಗುಂಟ) ರೈಲು:

ಪ್ರತಿ ಬುಧವಾರ 6.15 ಕ್ಕೆ ಶಿವಮೊಗ್ಗ ಟೌನ್ – ತಿರುಪತಿ(ರೇಣಿಗುಂಟ) ರೈಲು ಹೊರಡಲಿದ್ದು, ಬುಧವಾರ ರಾತ್ರಿ 8.05 ಕ್ಕೆ ತಿರುಪತಿ ತಲುಪಲಿದೆ. ಪ್ರತಿ ಬುಧವಾರ ರಾತ್ರಿ 9.45 ತಿರುಪತಿಯಿಂದ ಹೊರಟು ಗುರುವಾರ ಬೆಳಿಗ್ಗೆ 11.45 ಶಿವಮೊಗ್ಗ ತಲುಪಲಿದೆ.

ಶಿವಮೊಗ್ಗ, ಭದ್ರಾವತಿ, ತರೀಕೆರೆ, ಬೀರೂರು, ಅಜ್ಜಂಪುರ, ಹೊಸದುರ್ಗ ರೋಡ್, ಚಿಕ್ಕಜಾಜೂರು, ಚಿತ್ರದುರ್ಗ, ಮೊಳಕಾಲ್ಮೂರು, ರಾಯದುರ್ಗ, ಬಳ್ಳಾರಿ, ಗುಂತಕಲ್, ತಾಡಪತ್ರಿ, ಕೊಂಡಾಪುರಂ, ಯರಗುಂಟ್ಲ, ಕಡಪ, ರಾಜಂಪೇಟೆ ರೇಣಿಗುಂಟದಲ್ಲಿ ರೈಲು ನಿಲುಗಡೆ ಇರುತ್ತದೆ.

ಮೈಸೂರು – ಶಿವಮೊಗ್ಗ ಜನ ಸಾಧಾರಣ್ ಎಕ್ಸ್ ಪ್ರೆಸ್

ಮೈಸೂರು-ಶಿವಮೊಗ್ಗ ಜನ ಸಾಧಾರಣ್ ಎಕ್ಸ್ ಪ್ರೆಸ್ ಪ್ರತಿ ಗುರುವಾರ ಮಧ್ಯಾಹ್ನ 1 ಗಂಟೆಗೆ ಶಿವಮೊಗ್ಗದಿಂದ ಹೊರಟು ಸಂಜೆ 7.05 ಕ್ಕೆ ಮೈಸೂರು ತಲುಪಲಿದೆ. ಪ್ರತಿ ಸೋಮವಾರ ಸಂಜೆ 4.45 ಮೈಸೂರಿನಿಂದ ಹೊರಟು ರಾತ್ರಿ 10.30 ಕ್ಕೆ ಶಿವಮೊಗ್ಗ ತಲುಪಲಿದೆ.

ಕೆ.ಆರ್. ನಗರ, ಹೊಳೆನರಸೀಪುರ, ಹಾಸನ, ಅರಸೀಕೆರೆ, ಕಡೂರು, ಬೀರೂರು, ತರೀಕೆರೆ, ಭದ್ರಾವತಿಯಲ್ಲಿ ನಿಲುಗಡೆಯಾಗಿದೆ.

ಶಿವಮೊಗ್ಗ – ಚೆನ್ನೈ ರೈಲು

ಶಿವಮೊಗ್ಗ – ಚೆನ್ನೈ ರೈಲು ವಾರಕ್ಕೊಮ್ಮೆ ಸಂಚರಿಸಲಿದ್ದು, ಸೋಮವಾರ ರಾತ್ರಿ 11.55 ಕ್ಕೆ ಶಿವಮೊಗ್ಗದಿಂದ ಹೊರಟು ಮಂಗಳವಾರ ಮಧ್ಯಾಹ್ನ 11.15ಕ್ಕೆ ಚೆನ್ನೈ ತಲುಪಲಿದೆ. ಮಂಗಳವಾರ ಮಧ್ಯಾಹ್ನ 3 ಗಂಟೆಗೆ ಚೆನ್ನೈನಿಂದ ಹೊರಟು ಬುಧವಾರ ಬೆಳಿಗ್ಗೆ 3.55 ಕ್ಕೆ ಶಿವಮೊಗ್ಗ ತಲುಪಲಿದೆ.

ಭದ್ರಾವತಿ, ತರೀಕೆರೆ, ಬೀರೂರು, ಕಡೂರು, ಅರಸೀಕೆರೆ, ತುಮಕೂರು, ಚಿಕ್ಕಬಾಣಾವರ, ಬಾಣಸವಾಡಿ, ಕೃಷ್ಣರಾಜಪುರಂ, ಬಂಗಾರಪೇಟೆ, ಜೋಲಾರ್ ಪೇಟೆ, ಕಾಟಪಡಿ, ಪೆರಂಬೂರು, ಚೆನ್ನೈ ಸೆಂಟ್ರಲ್ ನಲ್ಲಿ ನಿಲುಗಡೆಯಾಗಲಿದೆ.

ನವಂಬರ್ 10ರಂದು ಬೆಳಗ್ಗೆ 11 ಗಂಟೆಗೆ ಶಿವಮೊಗ್ಗದಲ್ಲಿ ಲೋಕಸಭಾ ಸದಸ್ಯ ಬಿ.ವೈ. ರಾಘವೇಂದ್ರ ಈ ರೈಲುಗಳ ಸಂಚಾರಕ್ಕೆ ಹಸಿರು ನಿಶಾನೆ ತೋರಲಿದ್ದಾರೆ.

Subscribe Newsletter

Get latest updates on your inbox...

Opinion Poll

  • ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರ ಉಳಿದ ಅವಧಿಯನ್ನು ಪೂರೈಸಲಿದೆಯಾ...?

    View Results

    Loading ... Loading ...