alex Certify
ಕನ್ನಡ ದುನಿಯಾ       Mobile App
       

Kannada Duniya

ರೈಲು ಪ್ರಯಾಣಿಕರೇ ಗಮನಿಸಿ: ಇಲ್ಲಿದೆ ಒಂದು ಮುಖ್ಯ ಮಾಹಿತಿ

ರಿಸರ್ವೇಶನ್ ಚಾರ್ಟ್‌ ಅನ್ನು ರೈಲು ಕೋಚ್‌ಗಳಲ್ಲಿ ಅಂಟಿಸುವ ಪುರಾತನ ಸಂಪ್ರದಾಯಕ್ಕೆ ಭಾರತೀಯ ರೈಲ್ವೆ ತಿಲಾಂಜಲಿ ಹಾಡಿದೆ.

ಪರಿಸರ ಸಂರಕ್ಷಣೆ ದೃಷ್ಟಿಯಿಂದ ಕಾಗದ ಉಳಿಸುವ ಪ್ರಯತ್ನದ ಭಾಗವಾಗಿ ದೇಶಾದ್ಯಂತ ಈ ತಿಂಗಳ ಆರಂಭದಿಂದಲೇ ಈ ಪದ್ಧತಿಯನ್ನು ನಿಲ್ಲಿಸಲಾಗಿದೆ. ಆದರೆ ಪ್ಲಾಟ್‌ಫಾರಂಗಳಲ್ಲಿನ ಸಾಫ್ಟ್ ಬೋರ್ಡ್ ಮೇಲೆ ಅಂಟಿಸುವ ಭೌತಿಕ ಚಾರ್ಟ್‌ಗಳು ಮಾತ್ರ ಮುಂದುವರಿಯಲಿವೆ.

ದೇಶಾದ್ಯಂತ ಪ್ರತಿದಿನ ಮಾರಾಟವಾಗುವ 11 ಲಕ್ಷ ರೈಲ್ವೆ ಟಿಕೆಟ್‌ಗಳ ಪೈಕಿ ಶೇ.70 ರಷ್ಟು ಇಂಟರ್ನೆಟ್‌ನಲ್ಲಿ ಬುಕ್ ಆಗುವ ಕಾರಣದಿಂದ ಈ ಕ್ರಮ ಕೈಗೊಳ್ಳಲಾಗಿದೆ.

ಸಿಎಸ್‌ಟಿ, ಮುಂಬೈ ಸೆಂಟ್ರಲ್‌ನಂತಹ ಪ್ರಮುಖ ರೈಲು ನಿಲ್ದಾಣಗಳು ಚಾರ್ಟ್ ರದ್ದುಗೊಳಿಸಿ ತಿಂಗಳುಗಳೇ ಕಳೆದಿವೆ. ಕಳೆದ ಮಾರ್ಚ್‌ನಿಂದೀಚೆಗೆ ಈ ನಿಲ್ದಾಣಗಳಿಂದ ಹೊರಡುವ ರೈಲುಗಳ ಕೋಚ್‌ಗಳಲ್ಲಿ ಚಾರ್ಟ್ ಅಂಟಿಸುವ ಪದ್ಧತಿಯಿಲ್ಲ.

ಎ1, ಎ ಮತ್ತು ಬಿ ಕೆಟಗರಿಯ ನಿಲ್ದಾಣಗಳಲ್ಲಿ ಪ್ರಾಯೋಗಿಕ ರೂಪದಲ್ಲಿ ಮಾ.1ರಿಂದ 6 ತಿಂಗಳ ಕಾಲ ಚಾರ್ಟ್‌ಗಳನ್ನು ಅಂಟಿಸುವುದನ್ನು ಕೈಬಿಡಲಾಗಿತ್ತು.
2016 ರ ನವೆಂಬರ್‌ನಿಂದಲೇ ಪರಿಸರ ಸಂರಕ್ಷಣೆ ಭಾಗವಾಗಿ ನೈಋತ್ಯ ರೈಲ್ವೆ ಬೆಂಗಳೂರು ನಗರ ಹಾಗೂ ಯಶವಂತಪುರ ನಿಲ್ದಾಣಗಳಿಂದ ಹೊರಡುವ ರೈಲುಗಳಲ್ಲಿ ಚಾರ್ಟ್‌ಗಳನ್ನು ಅಂಟಿಸುವುದನ್ನು ಕೈಬಿಟ್ಟಿತ್ತು. ಈ ಕ್ರಮದ ಮೂಲಕ ದಕ್ಷಿಣ ರೈಲ್ವೆ 1,70,000 ರೂ. ಮೌಲ್ಯದ 28 ಟನ್ ಕಾಗದವನ್ನು ಉಳಿತಾಯ ಮಾಡಿತ್ತು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...