alex Certify
ಕನ್ನಡ ದುನಿಯಾ       Mobile App
       

Kannada Duniya

ಶೀಘ್ರದಲ್ಲಿಯೇ ವಿಮಾನದಲ್ಲಿ ಬಳಸಬಹುದು ಮೊಬೈಲ್, ಇಂಟರ್ನೆಟ್

ವಿಮಾನ ಪ್ರಯಾಣಿಕರಿಗೆ ಶೀಘ್ರದಲ್ಲಿಯೇ ಶುಭ ಸುದ್ದಿಯೊಂದು ಸಿಗಲಿದೆ. ಪ್ರಯಾಣಿಕರು ವಿಮಾನ ಪ್ರಯಾಣದ ವೇಳೆ ಮೊಬೈಲ್ ಹಾಗೂ ಇಂಟರ್ನೆಟ್ ಬಳಸಬಹುದಾಗಿದೆ. ಟೆಲಿಕಾಂ ನಿಯಂತ್ರಣ ಪ್ರಾಧಿಕಾರ ಟ್ರಾಯ್ ಈ ಬಗ್ಗೆ ಶಿಫಾರಸ್ಸು ಸಲ್ಲಿಸಿದೆ.

ಇನ್ ಫೈಟ್ ಕನೆಕ್ಟಿವಿಟಿಗೆ ನೀಡಿರುವ ಹೇಳಿಕೆ ಪ್ರಕಾರ, ಇಂಟರ್ನೆಟ್ ಪ್ರಾಧಿಕಾರ ಹಾಗೂ ಎಂಸಿಎಗೆ ಟ್ರಾಯ್ ಶಿಫಾರಸ್ಸು ಸಲ್ಲಿಸಿದೆ. ವಾಸ್ತವವಾಗಿ ಟೆಲಿಕಾಂ ಇಲಾಖೆ ಆಗಸ್ಟ್ 10,2017ರಂದು ಧ್ವನಿ, ದತ್ತಾಂಶ ಮತ್ತು ವೀಡಿಯೊ ಸೇವೆಗಳ ಪರಿಚಯಿಸುವ ವೇಳೆ ಟ್ರಾಯ್ ಗೆ ತನ್ನ ಅಭಿಪ್ರಾಯ ಹೇಳಿತ್ತು.

ದೇಶಿಯ, ಅಂತರಾಷ್ಟ್ರೀಯ ಹಾಗೂ ಭಾರತೀಯ ಪ್ರಾಂತ್ಯದಲ್ಲಿ ಹಾದು ಹೋಗುವ ವಿಮಾನಗಳಲ್ಲಿ ಈ ಸೇವೆ ಲಭ್ಯವಾಗಲಿದೆ. ಭಾರತೀಯ ಸೀಮಾ ಕ್ಷೇತ್ರದಿಂದ 3,000 ಮೀಟರ್ ಎತ್ತರದವರೆಗೆ ಈ ಸೇವೆಯ ಲಾಭವನ್ನು ಪ್ರಯಾಣಿಕರು ಪಡೆಯಬಹುದಾಗಿದೆ ಎಂದು ಟ್ರಾಯ್ ಹೇಳಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...