alex Certify
ಕನ್ನಡ ದುನಿಯಾ       Mobile App
       

Kannada Duniya

ಇನ್ಮುಂದೆ ತಪ್ಪಲಿದೆ ಅನಗತ್ಯ ಕಾಲ್ ಗಳ ಕಿರಿಕಿರಿ

ಮೊಬೈಲ್‌ ಗಳಿಗೆ ಬೇಕಾಬಿಟ್ಟಿ ಟೆಲಿ ಮಾರ್ಕೆಟಿಂಗ್‌ ಕರೆಗಳನ್ನು ಬರದಂತೆ ತಡೆಯಬೇಕು ಎಂದು ದೂರ ಸಂಪರ್ಕ ನಿಯಂತ್ರಕ ಟ್ರಾಯ್‌ ಹೇಳಿದೆ.

ಕರೆ ಅಥವಾ ಮೆಸೇಜ್‌ ಕಳುಹಿಸುವ ಸಂಸ್ಥೆ, ಆಪರೇಟರ್‌ ಗಳ ಜತೆ ನೋಂದಣಿ ಮಾಡಿಕೊಳ್ಳುವ ವ್ಯವಸ್ಥೆ ಮಾಡಿಕೊಳ್ಳಬೇಕು. ನೋಂದಣಿ ಮಾಡಿದವರು ಮಾತ್ರ ಮಾರ್ಕೆಂಟಿಂಗ್ ವಿಭಾಗದಲ್ಲಿನ ಕರೆ ಅಥವಾ ಸಂದೇಶಗಳನ್ನು ಕಳುಹಿಸುವಂತೆ ಆಗಬೇಕು ಎಂದು ಎಲ್ಲ ಸಂಸ್ಥೆಗಳಿಗೆ ಹೇಳಿದೆ. ಅಷ್ಟು ಮಾತ್ರ ಅಲ್ಲ, ಗ್ರಾಹಕರಲ್ಲಿಯೂ ಯಾರೆಲ್ಲ ಈ ಸಂದೇಶ ಅಥವಾ ಕರೆಗಳಿಗೆ ಸಬ್‌ಸ್ಕ್ರೈಬ್‌ ಆಗಿದ್ದಾರೋ ಅಂತವರು ಮಾತ್ರ ಇದರ ಉಪಯೋಗ ಪಡೆಯಬೇಕು ಎಂದು ಟ್ರಾಯ್‌ ಹೇಳಿದೆ.

ಗ್ರಾಹಕ ಆದ್ಯತೆಯ ನೋಂದಣಿ ವ್ಯವಸ್ಥೆ(ಸಿಆರ್‌ಪಿಎಫ್‌) ಜಾರಿಗೊಳಿಸಬೇಕು. ಯಾರು ಇಂತಹ ಕರೆ ಅಥವಾ ಮೆಸೇಜ್‌ಗಳನ್ನು ಪಡೆದುಕೊಳ್ಳಲು ಬಯಸುತ್ತಾರೋ ಅವರನ್ನು ಮಾತ್ರ ಸಂದೇಶಗಳು ತಲುಪಬೇಕು. ಎಲ್ಲರಿಗೂ, ಅನಗತ್ಯ ಸಂದರ್ಭಗಳಲ್ಲಿ ಕರೆ ಅಥವಾ ಮೆಸೇಜ್‌ಗಳನ್ನು ಕಳುಹಿಸಿ, ವಿಚಾರಗಳನ್ನು ಪ್ರಮೋಷನ್‌ ಮಾಡುವುದು ಆಗಬಾರದು. ಈ ನಿಯಮ ತಪ್ಪಿದಲ್ಲಿ 1 ಸಾವಿರ ರೂ. ನಿಂದ 50 ಲಕ್ಷ ರೂ. ವರೆಗೆ ದಂಡ ಹಾಕುವ ಅವಕಾಶ ಇರುವುದಾಗಿ ಟ್ರಾಯ್‌ ಸ್ಪಷ್ಟಪಡಿಸಿದೆ. ಇತ್ತೀಚೆಗೆ ಡೇಟಾ ಬಳಕೆದಾರರ ಗೌಪ್ಯತೆ ರಕ್ಷಣೆ ಸಂಬಂಧ ಟ್ರಾಯ್‌ ತನ್ನ ಅಸಮಾಧಾನವನ್ನು ವ್ಯಕ್ತಪಡಿಸಿತ್ತು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...