alex Certify
ಕನ್ನಡ ದುನಿಯಾ       Mobile App
       

Kannada Duniya

6 ಪೈಸೆಗೆ ಇಳಿಕೆಯಾಯ್ತು ಮೊಬೈಲ್ ಕರೆ ಸಂಪರ್ಕ ಶುಲ್ಕ

ನವದೆಹಲಿ: ಮೊಬೈಲ್ ಕರೆ ಸಂಪರ್ಕ ಶುಲ್ಕ(ಕಾಲ್ ಕನೆಕ್ಟ್ ಚಾರ್ಜ್)ವನ್ನು 6 ಪೈಸೆಗೆ ಇಳಿಕೆ ಮಾಡಲಾಗಿದೆ. ಭಾರತೀಯ ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರ(ಟ್ರಾಯ್) ಮೊಬೈಲ್ ಸೇವಾ ಪಂಪನಿಗಳ ನಡುವೆ ಇದ್ದ ಕಾಲ್ ಕನೆಕ್ಟ್ ಚಾರ್ಜ್ ಅನ್ನು 14 ಪೈಸೆಯಿಂದ 6 ಪೈಸೆಗೆ ಇಳಿಕೆ ಮಾಡಿದೆ.

ಅಕ್ಟೋಬರ್ 1 ರಿಂದ ಹೊಸ ದರ ಜಾರಿಗೆ ಬರಲಿದೆ. ಅಲ್ಲದೇ, 2020 ರ ಜನವರಿ 1 ರಿಂದ ಕರೆ ಸಂಪರ್ಕ ಶುಲ್ಕವನ್ನು ಸಂಪೂರ್ಣವಾಗಿ ರದ್ದುಗೊಳಿಸಲಾಗುವುದೆಂದು ಟ್ರಾಯ್ ತಿಳಿಸಿದೆ.

ಇದಕ್ಕೆ ಮೊಬೈಲ್ ಸೇವಾ ಸಂಸ್ಥೆಗಳ ಸಂಘ ವಿರೋಧ ವ್ಯಕ್ತಪಡಿಸಿದ್ದು, ಟ್ರಾಯ್ ನಿರ್ಧಾರದಿಂದ ಮೊಬೈಲ್ ಸೇವಾ ಕಂಪನಿಗಳಿಗೆ ಹಾನಿಯಾಗಲಿದೆ ಎಂದು ಹೇಳಿವೆ.

ಮೊಬೈಲ್ ಸೇವಾ ಸಂಸ್ಥೆಗಳು ಶುಲ್ಕ ಕಡಿತದ ಪ್ರಯೋಜನವನ್ನು ಗ್ರಾಹಕರಿಗೆ ವರ್ಗಾವಣೆ ಮಾಡಿದಲ್ಲಿ ಲೋಕಲ್ ಕರೆಗಳ ಶುಲ್ಕದಲ್ಲಿ ಇಳಿಕೆಯಾಗುವ ಸಾಧ್ಯತೆ ಇದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...