alex Certify
ಕನ್ನಡ ದುನಿಯಾ       Mobile App
       

Kannada Duniya

ಮೊಬೈಲ್ ಗ್ರಾಹಕರಿಗೆ ಇನ್ಮುಂದೆ ಬರಲ್ಲ ಪ್ರಿಂಟೆಡ್ ಬಿಲ್…?

ಪೋಸ್ಟ್ ಪೇಯ್ಡ್ ಹಾಗೂ ಸ್ಥಿರ ದೂರವಾಣಿ ಸಂಪರ್ಕ ಪಡೆದಿರುವ ಗ್ರಾಹಕರಿಗೆ ಮುದ್ರಿತ ಬಿಲ್ ಕಳುಹಿಸುವ ಅಗತ್ಯ ಇದೆಯೇ?

ಇಂಥದ್ದೊಂದು ಪ್ರಶ್ನೆಯನ್ನು ಭಾರತೀಯ ದೂರ ಸಂಪರ್ಕ ನಿಯಂತ್ರಣ ಪ್ರಾಧಿಕಾರ (ಟ್ರಾಯ್) ಈಗ ಬಳಕೆದಾರರು ಮತ್ತು ಸಂಬಂಧಪಟ್ಟವರ ಮುಂದಿಟ್ಟಿದೆ.

ಕಾಗದಕ್ಕಾಗಿ ಮರಗಳ ಹನನ ಮತ್ತು ಪರಿಸರಕ್ಕೆ ಹಾಗುವ ಹಾನಿಯನ್ನು ಗಮನದಲ್ಲಿಟ್ಟುಕೊಂಡು ಟ್ರಾಯ್ ಈ ಪ್ರಶ್ನೆ ಎತ್ತಿದೆ. ಹೇಗೂ ಬಹುತೇಕರ ಕೈಯಲ್ಲಿ ಸ್ಮಾರ್ಟ್ ಫೋನ್ ಇದೆ. ಪರಿಸ್ಥಿತಿ ಹೀಗಿರುವಾಗ ಗ್ರಾಹಕರಿಗೆ ಪ್ರತ್ಯೇಕವಾಗಿ ಮುದ್ರಿತ ಬಿಲ್ ಅನ್ನು ಕಳುಹಿಸಿಕೊಡಬೇಕೇ ಎಂದು ಟ್ರಾಯ್ ಕೇಳಿದೆ.

ಉದ್ಯಮ, ಸಂಘಟನೆಗಳು, ಸಂಸದರು, ಶಾಸಕರು, ಗಣ್ಯರಿಂದ ಬಂದ ಮನವಿಗಳ ಹಿನ್ನೆಲೆಯಲ್ಲಿ ಟ್ರಾಯ್ ಈ ವಿವರಣೆ ಕೇಳಿದೆ. ದಶಕದ ಹಿಂದೆ ಸ್ವತಃ ಟ್ರಾಯ್ ತನ್ನ ದೂರಸಂಪರ್ಕ ದರ ಆದೇಶಕ್ಕೆ ತಿದ್ದುಪಡಿ ತಂದು ಪೋಸ್ಟ್ ಪೇಯ್ಡ್ ಗ್ರಾಹಕರಿಗೆ ಮುದ್ರಿತ ಬಿಲ್ ನೀಡುವುದು ಕಡ್ಡಾಯಗೊಳಿಸಿತ್ತು.

ಗ್ರಾಹಕರು ಸೇರಿದಂತೆ ಸಂಬಂಧಿಸಿದವರು ಡಿ.10 ರೊಳಗೆ ಹಾಗೂ ಆಕ್ಷೇಪಗಳಿದ್ದಲ್ಲಿ ಡಿ.24ಕ್ಕೆ ಸಲ್ಲಿಸಬಹುದು ಎಂದು ಟ್ರಾಯ್ ಈ ಸಂಬಂಧ ಹೊರಡಿಸಿರುವ ಪತ್ರದಲ್ಲಿ ಹೇಳಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...