alex Certify
ಕನ್ನಡ ದುನಿಯಾ       Mobile App
       

Kannada Duniya

ಮೊಬೈಲ್ ಬಳಕೆದಾರರಿಗೆ ಗುಡ್ ನ್ಯೂಸ್: ನೆಟ್ ವರ್ಕ್ ಪೋರ್ಟಿಂಗ್ ಈಗ ಮತ್ತಷ್ಟು ಸುಲಭ

ಒಂದು ಮೊಬೈಲ್ ನೆಟ್ ವರ್ಕ್ ನಿಂದ ಇನ್ನೊಂದು ನೆಟ್ ವರ್ಕ್ ಗೆ ಪೋರ್ಟ್ ಮಾಡಿಕೊಳ್ಳುವುದನ್ನು ಟ್ರಾಯ್ ಸಂಸ್ಥೆ ಮತ್ತಷ್ಟು ಸರಳಗೊಳಿಸಿದೆ.

ಇಷ್ಟು ದಿನ ಒಂದು ಸಂಸ್ಥೆಯಿಂದ ಮತ್ತೊಂದು ಸಂಸ್ಥೆಗೆ ಪೋರ್ಟ್ ಆಗಲು ಗರಿಷ್ಠ ನಾಲ್ಕು ದಿನ ಅಗತ್ಯವಿತ್ತು. ಆದರೆ ಗ್ರಾಹಕರಿಗೆ ಪೋರ್ಟ್ ಪ್ರಕ್ರಿಯೆಯನ್ನು ಮತ್ತಷ್ಟು ‌ಸರಳಗೊಳಿಸುವ ನಿಟ್ಟಿನಲ್ಲಿ, ಒಂದೇ ವೃತ್ತದಲ್ಲಿ ಇರುವ ನೆಟ್ ವರ್ಕ್ ಗಳು ಕೇವಲ ಎರಡು ದಿನಗಳಲ್ಲಿ ಪೋರ್ಟ್ ಮಾಡಿಕೊಡಬೇಕೆಂದು ಎಲ್ಲ ಆಪರೇಟರ್ ಗಳಿಗೆ ಸೂಚನೆ ನೀಡಿದೆ‌.

2018 ರ ಎಂ.ಎನ್.ಪಿ. ತಿದ್ದುಪಡಿಯಲ್ಲಿ ಇದನ್ನು ಸೇರಿಸಿರುವ ಟ್ರಾಯ್, ಗ್ರಾಹಕರಿಗೆ ಇನ್ನಷ್ಟು ಉತ್ತಮ ಸೇವೆ ಒದಗಿಸುವ ದೃಷ್ಟಿಯಿಂದ ಒಂದೇ ವೃತ್ತದಲ್ಲಿರುವಾಗ ಎರಡು ದಿನದೊಳಗೆ ಪೋರ್ಟ್ ಮಾಡಲು ಅವಕಾಶ ಕಲ್ಪಿಸಿದೆ. ಆದರೆ ಒಂದು ವೃತ್ತದಿಂದ ಮತ್ತೊಂದು ಆಪರೇಟಿಂಗ್ ವೃತ್ತಕ್ಕೆ ಪೋರ್ಟ್ ಆಗಬೇಕಾದರೆ ಈ ಹಿಂದಿನಿಂತೆ ನಾಲ್ಕು ದಿನದಲ್ಲಿ ಪೋರ್ಟ್ ಪ್ರಕ್ರಿಯೆ ಪೂರ್ಣವಾಗಬೇಕು ಎಂದು ತಿಳಿಸಿದೆ.

ಇದರೊಂದಿಗೆ ಗ್ರಾಹಕರೊಬ್ಬರು ಮೊಬೈಲ್ ಆಪರೇಟರ್ ಬದಲಿಸಲು ಅರ್ಜಿ ಸಲ್ಲಿಸಿದ 24 ಗಂಟೆಯೊಳಗೆ, ಆ ನೆಟ್ ವರ್ಕ್, ಗ್ರಾಹಕ ಇಚ್ಛಿಸಿರುವ ನೆಟ್ ವರ್ಕ್ ಸಂಸ್ಥೆಗೆ ಗ್ರಾಹಕರ ಮಾಹಿತಿ ನೀಡಬೇಕು. ಒಂದು‌ ವೇಳೆ ವಿಫಲವಾದರೆ, ಸದ್ಯ 5 ಸಾವಿರ‌ ಗರಿಷ್ಠ ದಂಡವಿದ್ದು, ಅದನ್ನು ಹತ್ತು‌ ಸಾವಿರಕ್ಕೆ ಏರಿಸಬೇಕೆಂದು ಸದಸ್ಯರೊಬ್ಬರು ಅಭಿಪ್ರಾಯಪಟ್ಟಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...