alex Certify
ಕನ್ನಡ ದುನಿಯಾ       Mobile App
       

Kannada Duniya

ಹಬ್ಬದಲ್ಲಿ ಜೋರಾಗ್ತಿದೆ ಆನ್ಲೈನ್ ಶಾಪಿಂಗ್

online-shopping-festival_30_09_2016

ಇದು ಹಬ್ಬದ ತಿಂಗಳು. ಮೊದಲು ನವರಾತ್ರಿ. ನಂತ್ರ ದೀಪಾವಳಿ. ಹಬ್ಬದ ಸಂಭ್ರಮದಲ್ಲಿರುವ ಭಾರತೀಯರು ಶಾಪಿಂಗ್ ಮಾಡುವ ಮೂಡ್ ನಲ್ಲಿದ್ದಾರೆ. ಹೊಸ ಹಬ್ಬಕ್ಕೆ ಹೊಸ ಬಟ್ಟೆ, ವಸ್ತುಗಳನ್ನು ಖರೀದಿ ಶುರುಮಾಡಿದ್ದಾರೆ. ಇದನ್ನು ಬಂಡವಾಳ ಮಾಡಿಕೊಂಡಿರುವ ಆನ್ಲೈನ್ ಶಾಪಿಂಗ್ ಸೈಟ್ ಗಳು ಸಿಕ್ಕಾಪಟ್ಟೆ ಆಫರ್ ನೊಂದಿಗೆ ಗ್ರಾಹಕರ ಮುಂದೆ ಬಂದಿವೆ.

ಒಂದೊಂದು ಕಂಪನಿ ಒಂದೊಂದು ಆಫರ್ ಮೂಲಕ ಗ್ರಾಹಕರನ್ನು ಸೆಳೆಯುವ ಪ್ರಯತ್ನ ಮಾಡ್ತಿದೆ. ಅಸ್ಸೋಛಾಮ್  ವರದಿ ಪ್ರಕಾರ ಹಬ್ಬದ ತಿಂಗಳಲ್ಲಿ ಭಾರತೀಯರು 25 ಸಾವಿರ ಕೋಟಿ ರೂಪಾಯಿ ಶಾಪಿಂಗ್ ಮಾಡುವ ಸಾಧ್ಯತೆ ಇದೆಯಂತೆ. ಕಳೆದ ವರ್ಷ 20 ಸಾವಿರ ಕೋಟಿ ರೂ. ಖರೀದಿ ನಡೆದಿತ್ತಂತೆ.

ಫ್ಲಿಪ್ ಕಾರ್ಟ್ ಹಾಗೂ ಸ್ನ್ಯಾಪ್ ಡೀಲ್ ಕಂಪನಿಗಳ ಆಫರ್ ಇಂದಿನಿಂದ ಅಕ್ಟೋಬರ್ 5ರವರೆಗೆ ನಡೆಯಲಿದೆ. ಅಮೆಜಾನ್ ಕಂಪನಿ ಅಕ್ಟೋಬರ್ 2 ರಿಂದ 6 ರವರೆಗೆ ಆಫರ್ ನೀಡ್ತಾ ಇದೆ. ಇದರ ಸಂಪೂರ್ಣ ಲಾಭ ಪಡೆಯಲು ಗ್ರಾಹಕರು ತುದಿಗಾಲಿನಲ್ಲಿ ನಿಂತಿದ್ದಾರೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...