alex Certify
ಕನ್ನಡ ದುನಿಯಾ       Mobile App
       

Kannada Duniya

ಇಳಿಕೆಯಾಯ್ತು ಟೊಮೆಟೊ ದರ

tomato

ಬೆಂಗಳೂರು: ಸೇಬಿಗೆ ಪೈಪೋಟಿ ನೀಡುವಂತೆ ಏರಿಕೆಯಾಗಿದ್ದ ಟೊಮೆಟೊ ದರ ಕಡಿಮೆಯಾಗತೊಡಗಿದೆ. ಕೆ.ಜಿ.ಗೆ ಬರೋಬ್ಬರಿ 100 ರೂ. ವರೆಗೂ ಮಾರಾಟವಾಗಿತ್ತು.

ಬೆಂಗಳೂರು, ದೆಹಲಿ ಸೇರಿದಂತೆ ಅನೇಕ ಕಡೆಗಳಲ್ಲಿ ಟೊಮೆಟೊ ಬೆಲೆ ಗಗನಕ್ಕೇರಿತ್ತು. ಹೆಚ್ಚಿನವರು ಅಡುಗೆಯಲ್ಲಿ ಟೊಮೆಟೊ ಬಳಸುವುದನ್ನೇ ಬಿಡುವಂತಾಗಿತ್ತು.

ಆದರೆ, ಟೊಮೆಟೊ ಪೂರೈಕೆ ಹೆಚ್ಚಳವಾಗುತ್ತಿರುವುದರಿಂದ ಬೆಲೆ ನಿಧಾನವಾಗಿ ಕಡಿಮೆಯಾಗತೊಡಗಿದೆ. ದೇಶದಲ್ಲಿಯೇ ಅತಿ ದೊಡ್ಡ ಟೊಮೆಟೊ ಮಾರುಕಟ್ಟೆಯಾಗಿರುವ ಕೋಲಾರ ಎ.ಪಿ.ಎಂ.ಸಿ. ಯಲ್ಲಿ ಕೆ.ಜಿ.ಗೆ. 40 ರೂ.ಗೆ ಇಳಿದಿದೆ.

ಕಳೆದ ವಾರದಿಂದ ಬಿಸಿಲಿನ ವಾತಾವರಣ ಇರುವುದರಿಂದ ಟೊಮೆಟೊ ಪೂರೈಕೆ ಹೆಚ್ಚಾಗಿದ್ದು, ಬೆಲೆ ಇಳಿಕೆಯಾಗತೊಡಗಿದೆ. ಚಿಲ್ಲರೆ ಮಾರುಕಟ್ಟೆಯಲ್ಲಿಯೂ ಬೆಲೆ 40 ರೂ.ಗೆ ಇಳಿದಿದೆ. ಪೂರೈಕೆ ಹೆಚ್ಚಿದಂತೆ ಒಂದೆರಡು ದಿನಗಳಲ್ಲಿ ಬೆಲೆ ಇನ್ನಷ್ಟು ಕಡಿಮೆಯಾಗುವ ಸಾಧ್ಯತೆ ಇದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...