alex Certify
ಕನ್ನಡ ದುನಿಯಾ       Mobile App
       

Kannada Duniya

ಪೆಟ್ರೋಲ್ ಗೆ ಪೈಪೋಟಿ ನೀಡಿದ ಡೀಸೆಲ್ ಬೆಲೆ

ನವದೆಹಲಿ: ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಏರಿಕೆಯಾಗುತ್ತಿದ್ದು, ಗ್ರಾಹಕರಿಗೆ ಹೊರೆಯಾಗಿ ಪರಿಣಮಿಸಿದೆ. ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಗಗನಕ್ಕೇರುತ್ತಿದ್ದು, ಡೀಸೆಲ್ ಬೆಲೆ 8 ತಿಂಗಳ ಹಿಂದೆ ಇದ್ದ ಪೆಟ್ರೋಲ್ ಬೆಲೆಯನ್ನು ತಲುಪಿದೆ.

ದೆಹಲಿಯಲ್ಲಿ ಲೀಟರ್ ಪೆಟ್ರೋಲ್ ಗೆ 74.63 ರೂ., ಕೋಲ್ಕತ್ತಾದಲ್ಲಿ 77.32 ರೂ., ಮುಂಬೈನಲ್ಲಿ 82.48 ರೂ., ಚೆನ್ನೈನಲ್ಲಿ 77.43 ರೂ. ಆಗಿದೆ. ಅದೇ ರೀತಿ ಡೀಸೆಲ್ ಬೆಲೆ ದೆಹಲಿಯಲ್ಲಿ 65.93 ರೂ., ಕೋಲ್ಕತ್ತಾದಲ್ಲಿ 68.63 ರೂ., ಮುಂಬೈನಲ್ಲಿ 70.20 ರೂ., ಚೆನ್ನೈನಲ್ಲಿ 69.56 ರೂ. ಆಗಿದೆ.

ಕಚ್ಚಾತೈಲದ ಬೆಲೆ ಏರುಗತಿಯಲ್ಲಿರುವುದರಿಂದ ದೇಶೀಯ ಮಾರುಕಟ್ಟೆಯಲ್ಲಿ ಪೆಟ್ರೋಲ್, ಡೀಸೆಲ್ ಬೆಲೆ ಹೆಚ್ಚಳವಾಗುತ್ತಿದೆ. ಡೀಸೆಲ್ ಬೆಲೆ ಇಂದು ದೆಹಲಿಯಲ್ಲಿ 65.93 ರೂ. ತಲುಪಿದ್ದು, 2017 ರ ಆಗಸ್ಟ್ 3 ರಂದು ದೆಹಲಿಯಲ್ಲಿ ಪೆಟ್ರೋಲ್ ಗೆ 65.69 ರೂ. ಇತ್ತು. ಇಂದು ದಾಖಲಾಗಿರುವ ಡೀಸೆಲ್ ಬೆಲೆ ಎಲ್ಲಾ ಕಾಲಕ್ಕೂ ಅತಿ ಹೆಚ್ಚಿನ ಬೆಲೆಯಾಗಿದೆ. ಏಪ್ರಿಲ್ 14 ರಿಂದ ಲೀಟರ್ ಡೀಸೆಲ್ ಬೆಲೆ 65 ರೂ. ದಾಟಿದೆ.

ದೆಹಲಿಯಲ್ಲಿ ಪೆಟ್ರೋಲ್ ಬೆಲೆ ದಾಖಲೆ ಮಟ್ಟಕ್ಕೆ ಏರಿದೆ. 2013 ರ ಸೆಪ್ಟಂಬರ್ 14 ರ ಬಳಿಕ(ಅಂದಿನ ಬೆಲೆ 76.06 ರೂ.) ಹೊಸ ದಾಖಲೆ ಬರೆದಿದೆ. ಈ ತಿಂಗಳಲ್ಲಿ ಪೆಟ್ರೋಲ್ ಬೆಲೆ ದೆಹಲಿಯಲ್ಲಿ 1.08 ರೂ., ಕೋಲ್ಕತ್ತಾದಲ್ಲಿ 1.06 ರೂ., ಮುಂಬೈನಲ್ಲಿ 1.07 ರೂ., ಚೆನ್ನೈನಲ್ಲಿ 1.14 ರೂ. ಏರಿಕೆಯಾಗಿದೆ.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...