alex Certify
ಕನ್ನಡ ದುನಿಯಾ       Mobile App
       

Kannada Duniya

ಟೇಕಾಫ್ ಆಗುತ್ತಿದ್ದ ವಿಮಾನವನ್ನು ವಾಪಾಸ್ ಕರೆಸಿದ್ದೇಕೆ ಗೊತ್ತಾ?

ಸುಮಾರು 16 ಕೋಟಿ ರೂಪಾಯಿ ಮೌಲ್ಯದ ಅಕ್ರಮ ಚಿನ್ನಾಭರಣಗಳನ್ನು ಕೊಂಡೊಯ್ಯುತ್ತಿದ್ದ ಇಬ್ಬರನ್ನು ಕಂದಾಯ ಗುಪ್ತಚರ ನಿರ್ದೇಶನಾಲಯದ ಅಧಿಕಾರಿಗಳು ಬಂಧಿಸಿದ್ದಾರೆ. ಚಿನ್ನಾಭರಣ ವ್ಯಾಪಾರಿ ಸಂಜಯ್ ಕುಮಾರ್ ಅಗರ್ವಾಲ್ ಹಾಗೂ ಆತನ ಮಗನನ್ನು ಹಿಡಿಯಲೆಂದೇ ಕೋಲ್ಕತ್ತಾ ವಿಮಾನ ನಿಲ್ದಾಣದಲ್ಲಿ ಟೇಕಾಫ್ ಆಗುತ್ತಿದ್ದ ಫ್ಲೈಟ್ ಅನ್ನು ಹಿಂದಕ್ಕೆ ಕರೆಸಲಾಗಿತ್ತು.

ಪದೇ ಪದೇ ಕೋಲ್ಕತ್ತಾದಿಂದ ದುಬೈಗೆ ಪ್ರಯಾಣಿಸುತ್ತಿದ್ದ ಸಂಜಯ್ ಅಗರ್ವಾಲ್  ಮಗನ ಹೆಸರಿನಲ್ಲಿ ಟಿಕೆಟ್ ಬುಕ್ ಮಾಡಿಕೊಂಡಿರುತ್ತಿದ್ದ. ಈ ಬಗ್ಗೆ ಅಧಿಕಾರಿಗಳು ಆರೋಪಿಯನ್ನು ಪ್ರಶ್ನಿಸಲಾಗಿ ಕಳೆದ ವರ್ಷ 1100 ಕೆಜಿ ಅಂದರೆ ಸುಮಾರು 300 ಕೋಟಿ ಮೌಲ್ಯದ ಶುದ್ಧ ಚಿನ್ನವನ್ನು ಅಕ್ರಮವಾಗಿ ಸಾಗಣೆ ಮಾಡಿದ್ದಾಗಿ ತಿಳಿದುಬಂದಿದೆ.

ಅಲ್ಲದೇ ರಾಜ್ಯ ವ್ಯಾಪಾರ ನಿಗಮ ಮತ್ತು ಮೆಟಲ್ಸ್ ಅಂಡ್ ಮಿನರಲ್ಸ್ ಟ್ರೇಡಿಂಗ್ ಕಾರ್ಪೋರೇಶನ್ ಆಫ್ ಇಂಡಿಯಾದಿಂದ ಖರೀದಿ ಮಾಡಿ, ಅದಕ್ಕೆ ಶೇ. 10ರಷ್ಟು ವಿನಾಯಿತಿಯನ್ನೂ ಪಡೆದು ಆಭರಣ ರಫ್ತು ಮಾಡುವ ಘೋಷಿತ ಉದ್ದೇಶದಿಂದಲೇ ಪಡೆದುಕೊಳ್ಳಲಾಗಿತ್ತು. ಆದರೆ ಆರೋಪಿ ದೇಶೀಯ ಬಳಕೆಗೆ ಚಿನ್ನವನ್ನು ಖರೀದಿ ಮಾಡಿದ್ದೇ ಆದರೆ ಸುಮಾರು 30 ಕೋಟಿಯಷ್ಟು ಹಣವನ್ನು ಆದಾಯ ತೆರಿಗೆ ಹಾಗೂ ಅಬಕಾರಿ ಸುಂಕವನ್ನಾಗಿ ನೀಡಬೇಕಾಗಿತ್ತು.

Subscribe Newsletter

Get latest updates on your inbox...

Opinion Poll

  • ಕೇಂದ್ರದ ಬಿಜೆಪಿ ಸರ್ಕಾರ, ತನಿಖಾ ಸಂಸ್ಥೆಗಳನ್ನು ಬಳಸಿಕೊಂಡು ವಿರೋಧಿಗಳನ್ನು ಹಣಿಯುವ ದ್ವೇಷದ ರಾಜಕಾರಣ ಮಾಡುತ್ತಿದೆಯಾ?

    View Results

    Loading ... Loading ...